75ರ ಯಡ್ಡಿ ವಿರುದ್ಧ ಸ್ಪರ್ಧಿಸಲು ಹೆಲಿಕಾಪ್ಟರ್ ಮೂಲಕ ಬಂದ 25ರ ಯುವಕ ಯಾರು ಗೊತ್ತೇ?

0
1049

ನ್ಯೂಸ್ ಕನ್ನಡ ವರದಿ : ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಹೊಸ ಹೊಸ ರಾಜಕೀಯ ಬೆಳವಣಿಗೆಗಳು ಕಂಡುಬರುತ್ತಿದೆ. ಈಗಾಗಲೇ ರಾಜಕೀಯ ನಾಯಕರು ತಮ್ಮ ತಮ್ಮ ಕ್ಷೇತ್ರವನ್ನು ಆಯ್ಕೆ ಮಾಡಿ ನಾಮಪತ್ರ ಸಲ್ಲಿಸುವ ಕಾರ್ಯದಲ್ಲಿ ತೊಡಗಿದ್ದು, ಚುನಾವಣೆಯ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾರೆ.

ಇದೇ ಸಂಧರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ರವರ ವಿರುದ್ಧ ಅವರ ರಾಜಕೀಯ ಭಧ್ರಕೋಟೆಯಾಗಿರುವ ಶಿಕಾರಿಪುರದಲ್ಲಿ 25 ವರ್ಷದ ಯುವಕ ವಿನಯ್ ರಾಜಾವತ್ ಬೆಂಗಳೂರಿನಿಂದ ಶನಿವಾರದಂದು ಹೆಲಿಕಾಪ್ಟರ್‌ನಲ್ಲಿ ಶಿಕಾರಿಪುರಕ್ಕೆ ಆಗಮಿಸಿ ನಾಮಪತ್ರ ಸಲ್ಲಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಶಿವಮೊಗ್ಗದ ಕುಂಚೇನಹಳ್ಳಿ ತಾಂಡದ ನಿವಾಸಿಯಾದ ವಿನಯ್, ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ಹಾಗೂ ಸ್ಟುಡೆಂಟ್ ಯೂನಿಯನ್ ಲೀಡರ್. ಚಿತ್ರವೊಂದರಲ್ಲಿಯೂ ಅವರು ನಟಿಸಿದ್ದಾರೆ. ಬಿಎಸ್‌ಸಿ ಪದವಿ ಪಡೆದಿರುವ ವಿನಯ್ ಸದ್ಯ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವಿನಯ್ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರ ಅಭಿಮಾನಿ ಕೂಡ.

ವಿನಯ್ ಹುಚ್ಚರಾಯಸ್ವಾಮಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು. ನಂತರ ತಾಲೂಕು ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿ, ಹೆಲಿಕಾಪ್ಟರ್ ಮೂಲಕವೇ ಬೆಂಗಳೂರಿಗೆ ತೆರಳಿದರು. ಅಂತೂ ಈ ಬಾರಿಯ ಚುನಾವಣೆಯಲ್ಲಿ ಸ್ವಯಂಬಲದ ಮೇಲೆ ಯಾರು ಅಧಿಕಾರ ಸಾಧಿಸುವರು ಎಂದು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here