ಮೀಡಿಯಾಗಳು ಹೇಳಿದ ವೈರಸ್ ಇರುವ ಸಾವಿರಾರು ತಬ್ಲೀಘಿಗಳು ಎಲ್ಲಿ ಹೋದರು… ಹರೀಶ ಡಿ. ಪೂಜಾರಿ ಅವರ ಬರಹ

0
549

ತಬ್ಲೀಘಿ_ಮುಸ್ಲಿಮರು ಸಾವಿರಾರು ಸಂಖ್ಯೆಯಲ್ಲಿ ಕೊರೋನಾ ಸೋಂಕು ತಗುಲಿಸಿ ಕೊಂಡು ಚಿಕಿತ್ಸೆಗೆ ಸಹಕರಿಸಿದೆ ಬೇರೆಯವರಿಗೆ ಸೋಂಕು ಹರಡಲು ಗುಪ್ತವಾಗಿ ಓಡಾಡುತ್ತಾರೆ 

ಎಂದು ಮಾರ್ಚ್ 25 ರಿಂದ ಇವತ್ತಿನವರೆಗೂ ಗೋದಿ ಮೀಡಿಯಾಗಳು ವಾಟ್ಸಾಪ್ ಯುನಿವರ್ಸಿಟಿ ನಮೋ ಭಕ್ತರು
ಇವತ್ತಿನವರೆಗೂ ಪ್ರಚಾರ ಮಾಡುತ್ತಲೇ ಇದ್ದಾರೆ
ಒಂದು ವೇಳೆ ಇದು ನಿಜವೇ ಆಗಿದ್ದರೆ
ಕೊರೋನಾ ಸೋಂಕು ತಗುಲಿ ಹದಿನೈದು ದಿನಗಳ ಒಳಗೆ ಚಿಕಿತ್ಸೆ ಪಡೆಯದೇ ಇದ್ದರೆ ಸಾವು ಖಚಿತ ಎಂದು
ವೈದ್ಯಕೀಯ ವರದಿ ಹೇಳುತ್ತದೆ
ಅಂದ ಮೇಲೆ ಈಗಾಗಲೇ ಸಾವಿರಾರು ಕೊರೋನಾ ಸೋಂಕು ತಗುಲಿರುವ ತಬ್ಲೀಘಿ ಮುಸ್ಲಿಮರ
ಸಾವು ಸಂಭವಿಸ ಬೇಕಿತ್ತು..
ಅಂತಹ ಯಾವುದೇ ವರದಿ ಬಂದಿಲ್ಲಾ
ಇಲ್ಲಿವರೆಗೆ ಸೋಂಕು ತಗುಲಿ ಗುಣಮುಖ ಆದವರು ಕೇವಲ ಸಾವಿರ
ಸತ್ತವರು ಮುನ್ನೂರು ಅದು ಹದಿನೈದು ದಿನಗಳ ನಂತರದ ಅಂಕಿಅಂಶಗಳು
ಅಂದ ಮೇಲೆ ತಿಂಗಳ ಹಿಂದೆ ಸೋಂಕು ತಗುಲಿಸಿ ಕೊಂಡ ಸಾವಿರಾರು (ಮೀಡಿಯಾಗಳ ಪ್ರಕಾರ) ತಬ್ಲೀಘಿ ಮುಸ್ಲಿಮರು ಎಲ್ಲಿ ಹೋದರು…
ಅವರ ಬಳಿ ಸೋಂಕು ತಡೆದುಕೊಳ್ಳುವ ವಿಶೇಷ ಶಕ್ತಿ ಏನಾದರೂ ಇದೆಯೇ
ವಾಟ್ಸಾಪ್ ಯುನಿವರ್ಸಿಟಿ ಬಕೆಟ್ ಮಾಧ್ಯಮಗಳು ಉತ್ತರಿಸಬೇಕು. 
ನಾವು ಕೊರೋನಾ ತಡೆಗೆ ಸರ್ಕಾರದ ವೈಫಲ್ಯ ಸೂಕ್ತ ಸಮಯದಲ್ಲಿ ಸರ್ಕಾರ ಎಚ್ಚೆತ್ತುಕೊಂಡಿಲ್ಲ ಎಂದು ಹೇಳಿದರೆ
ನೀವುಗಳು ಸಾಬಿಗಳು ಕೊರೋನಾ ಹರಡಲು ತಬ್ಲೀಘಿ ಮುಸ್ಲಿಮರು ಕಾರಣ ನೀವುಗಳು ಅವುಗಳನ್ನು ಪ್ರಶ್ನೆ ಮಾಡುವುದಿಲ್ಲ ನೀವು ಹಿಂದೂ ವಿರೋಧಿಗಳು ಎಂದು ನಮೋ ಭಕ್ತ ಮಂಡಳಿ ನಮ್ಮ ಮೇಲೆ ಮುಗಿ ಬೀಳುತ್ತಿದ್ದಾರೆ
ಸರಿ ಕೊರೋನಾ ಹರಡಲು ತಬ್ಲೀಘಿ ಮುಸ್ಲಿಮರು ಕಾರಣ ಎಂದು ಇಟ್ಟುಕೊಳ್ಳೋಣ.
ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಪ್ರಥಮ ಕೊರೋನಾ ಸೋಂಕು ಪ್ರಕರಣ ಪತ್ತೆ ಆಗಿದ್ದು ರಾಜಸ್ಥಾನದಲ್ಲಿ ಇಟಲಿ ಪ್ರವಾಸಿಗ ಮತ್ತು ಚೀನಾದಿಂದ ಬಂದ ಕೇರಳದ ವಿದ್ಯಾರ್ಥಿ

ವಿದೇಶದಿಂದ ಯಾರು ರೆಕ್ಕೆ ಕಟ್ಟಿ ಹಾರಾಡಿಕೊಂಡು ಇಲ್ಲಾ ಸಮುದ್ರದಲ್ಲಿ ಈಜಾಡಿ ಬರುವುದಿಲ್ಲ ವಿಮಾನದ ಮೂಲಕ ಬರಬೇಕು ತಾನೇ
ಭಕ್ತ ಮಂಡಳಿ ಒಂದು ಕ್ಷಣ ಯೋಚಿಸಿ ಇವತ್ತು ದೇಶದ ಪ್ರಜೆಗಳನ್ನು ಮನೆಯಲ್ಲಿ ಕೂಡಿ ಹಾಕಿದ್ದಾರೆ
ಅದೇ ಜನವರಿಯಿಂದ  ವಿದೇಶದಿಂದ ಬರುವವರನ್ನು ಕಡ್ಡಾಯ ತಪಾಸಣೆ ಹದಿನೈದು ದಿನಗಳ ಕಾಲ ನಿಗಾವಹಿಸಲು ವ್ಯವಸ್ಥೆ ಮಾಡುತ್ತಿದ್ದರೆ

ವಿದೇಶದಿಂದ ವಿದೇಶಿಯರು ಯಾವ ದೇಶದ ಯಾವ ರಾಜ್ಯದ ಯಾವ ಊರಿನಿಂದ ಯಾವ ಗಲ್ಲಿಯಿಂದ ಯಾವ ಕಾರಣಕ್ಕೆ ಯಾವ ಉದ್ದೇಶದಿಂದ ನಮ್ಮ ದೇಶಕ್ಕೆ ಬರುತ್ತಾರೆ ಎಂಬ ಸಂಪೂರ್ಣ ಮಾಹಿತಿ ಸರ್ಕಾರಕ್ಕೆ ವಿದೇಶಾಂಗ ಸಚಿವಾಲಯಕ್ಕೆ ಇರುತ್ತದೆ
ನಮ್ಮ ದೇಶದಲ್ಲಿ ಇರುವ ಬೇರೆ ಬೇರೆ ದೇಶಗಳ ರಾಯಭಾರಿ ಕಚೇರಿಗಳು ಅವರ ದೇಶದ ಪ್ರಜೆಗಳು ನಮ್ಮ ದೇಶ ಪ್ರವೇಶಕ್ಕೆ ಸರ್ಕಾರದ ಅನುಮತಿ ಕೇಳುತ್ತದೆ
ನಮ್ಮ ಸರ್ಕಾರದ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಿದ ಮೇಲೆ ಮಾತ್ರ ವಿದೇಶಿಯರು ನಮ್ಮ ದೇಶ ಪ್ರವೇಶ ಮಾಡಲು ಸಾಧ್ಯ
ಕೊರೋನಾ ಸೋಂಕು ವ್ಯಾಪಿಸುತ್ತಿರುವ ಸಮಯದಲ್ಲಿ ಭಾರತೀಯರು ಅಲ್ಲದೆ ಇರುವವರಿಗೆ ದೇಶ ಪ್ರವೇಶಕ್ಕೆ ಅನುಮತಿ ನಿರಾಕರಿಸುತ್ತಿದ್ದರೆ ವಿದೇಶಿ ತಬ್ಲೀಘಿಗಳು ದೇಶಕ್ಕೆ ಕೊರೋನಾ ಹೊತ್ತು ತರುತ್ತಲೇ ಇರಲಿಲ್ಲಾ ಅಲ್ಲವೇ
WhO ಫೆಬ್ರುವರಿ ತಿಂಗಳಲ್ಲಿ ಕೊರೋನಾ ಬಗ್ಗೆ ಎಚ್ಚರಿಕೆ ನೀಡಿದಾಗ ನಮ್ಮ ದೇಶದಲ್ಲಿ ಎಲ್ಲಾ ಧರ್ಮಗಳು ಗುಂಪು ಗೂಡಿ ನಡೆಸುವ ಧಾರ್ಮಿಕ ಕಾರ್ಯಕ್ರಮಗಳು ಕಡ್ಡಾಯವಾಗಿ ನಿಷೇಧ ಮಾಡುತ್ತಿದ್ದರೆ ಇವತ್ತೂ ಈ ಪರಿಸ್ಥಿತಿ ಬರುತ್ತಿರಲಿಲ್ಲ. 
ಯೋಚಿಸಿ
ಇವತ್ತು ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಹಾಕಲು ಎಲ್ಲಾ ತಪ್ಪುಗಳನ್ನು ಮಾಧ್ಯಮಗಳ ಮೂಲಕ ವಾಟ್ಸಾಪ್ ಯುನಿವರ್ಸಿಟಿ ಮೂಲಕ ಮುಸ್ಲಿಂ ಸಮುದಾಯ ಮೇಲೆ ಹಾಕಿ ಕೈ ತೊಳೆದುಕೊಂಡು ಸುಮ್ಮನೆ ತಮಾಷೆ ನೋಡುತ್ತಿದೆ.

ಇದರಲ್ಲಿ ಮೂರ್ಖರಾಗುತ್ತಿರುವುದು ಬಲಿಪಶು ಆಗುತ್ತಿರುವುದು  ನೀವುಗಳು ನೀವು ಯದ್ವಾ ಯದ್ವಾ ಸಮರ್ಥನೆ ಮಾಡುತ್ತಿರುವ ಸರ್ಕಾರ ನಿಮ್ಮನ್ನು ಹೇಗೆ ವ್ಯವಸ್ಥಿತವಾಗಿ ಮೋಸ ಮಾಡುತ್ತಿದೆ ಎಂದು ಯೋಚಿಸಿ. 

LEAVE A REPLY

Please enter your comment!
Please enter your name here