ಉತ್ತರ ಪ್ರದೇಶ: ವೃದ್ಧೆಗೆ ಆಂಬುಲೆನ್ಸ್ ನಿರಾಕರಣೆ; ಆಸ್ಪತ್ರೆಗೆ ರೋಗಿಯನ್ನು ಮಂಚದಲ್ಲೇ ಹೊತ್ತು ಸಾಗಿಸಿದ ಕುಟುಂಬಸ್ಥರು!

0
382

ನ್ಯೂಸ್ ಕನ್ನಡ ವರದಿ(15-04-2018): ಜನರಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಪದೇ ಪದೇ ಸುದ್ಧಿಯಾಗುತ್ತಿರುವ ಉತ್ತರ ಪ್ರದೇಶದಲ್ಲಿ ಮತ್ತೊಂದು ಅಮಾನವೀಯ ಪ್ರಕರಣವು ಬೆಳಕಿಗೆ ಬಂದಿದ್ದು, 70 ರ ಹರೆಯದ ವೃದ್ಧೆಗೆ ಆಸ್ಪತ್ರೆಯು ಆಂಬುಲೆನ್ಸ್ ನಿರಾಕರಿಸಿದ ಕಾರಣದಿಂದ ಕುಟುಂಸ್ಥರು ರೋಗಿಯನ್ನು ಮಂಚದಲ್ಲೇ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿದ ಘಟನೆ ಶಹಜಹಾನ್ ಪುರ ಜಿಲ್ಲೆಯಿಂದ ವರದಿಯಾಗಿದೆ.

ಶಹಜಹಾನ್ ಪುರ ಜಿಲ್ಲೆಯ ಭೇದ್ ಪುರ ಎಂಬಲ್ಲಿ ಮಂಜಿತ್ ಕೌರ್ ಎಂಬ ಮಹಿಳೆ ರೋಗ ಪೀಡಿತಳಾಗಿ ಆಕೆಗೆ ನಡೆಯಲಸಾಧ್ಯ ವಾಗಿದ್ದರಿಂದ ಕುಟುಂಬಸ್ಥರು 108ಕ್ಕೆ ಕರೆಮಾಡಿ ಆಂಬುಲೆನ್ಸ್ ನೀಡುವಂತೆ ಕೇಳಿಕೊಂಡರು. ವಾಹನದಲ್ಲಿ ಡಿಸೇಲ್ ಇಲ್ಲದ ಕಾರಣ ನೀಡಿ ಮೇಲ್ವಿಚಾರಕರು ಆಂಬುಲೆನ್ಸ್ ನಿರಾಕರಿಸಿದರು. ಇದರಿಂದ ಬೇರೆ ದಾರಿ ಕಾಣದ ಮಹಿಳೆಯ ಕುಟುಂಬಸ್ಥರು ಆಕೆಯನ್ನು ಮಲಗಿದ್ದ ಮಂಚದಲ್ಲೇ ಹೊತ್ತುಕೊಂಡು ಆಸ್ಪತ್ರೆಗೆ ಸಾಗಿಸಿದರು. ಈ ಘಟನೆಯು ಮಾಧ್ಯಮಗಳಲ್ಲಿ ವರದಿ ಮಾಡಲ್ಪಟ್ಟ ಬಳಿಕ ಮುಖ್ಯ ವೈದ್ಯಾಧಿಕಾರಿ ಲಕ್ಷ್ಮಣ್ ಪ್ರಸಾದ್ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ.

LEAVE A REPLY

Please enter your comment!
Please enter your name here