ಬಿಜೆಪಿಗೂ ತಟ್ಟಿದ ಐ.ಟಿ ಬಿಸಿ: ಶ್ರೀರಾಮುಲು ತಂಗಿದ್ದ ಹೋಟೆಲ್ ಮೇಲೆ ಕ್ಷಿಪ್ರ ದಾಳಿ!

0
543

ನ್ಯೂಸ್ ಕನ್ನಡ ವರದಿ: ದೇಶದಾದ್ಯಂತ ಜನರು ಕುತೂಹಲದಿಂದ ಕಾಯುತ್ತಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಅಂತಿಮ ಹಂತದ ಪ್ರಚಾರ ಕಾರ್ಯದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತೊಡಗಿಸಿಕೊಂಡಿದ್ದು. ಇದೇ ಸಂಧರ್ಭದಲ್ಲಿ ಹಲವಾರು ಕಾಂಗ್ರೆಸ್ ನಾಯಕರ ಮನೆಗೆ ಐ.ಟಿ ದಾಳಿ ಆಗಿತ್ತು. ಇದೀಗ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀರಾಮುಲು ಅವರು ತಂಗಿದ್ದ ಇಲ್ಲಿನ ಬಾದಾಮಿ ಕೋರ್ಟ್ ಹೊಟೇಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ರಾಮುಲು ಕೋಣೆಗಳು ಹಾಗೂ ಹಾಜರಾತಿ ಪುಸ್ತಕದಲ್ಲಿನ ಮಾಹಿತಿ ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲಿಸಲಾಗಿದೆ.

ಐಟಿ ಅಧಿಕಾರಿ ಪಿ.ರಮೇಶ್‍ಕುಮಾರ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಹೊಟೇಲ್‍ನ ಮಾಲೀಕರಿಗೆ ನೋಟೀಸ್ ಕೂಡ ನೀಡಲಾಗುತ್ತಿದೆ. ಮೊಣಕಾಲ್ಮೂರಿನಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರೇವಣ್ಣ ಅವರ ನಿವಾಸ ಹಾಗೂ ಕೋಳಿ ಫಾರಂ ಸೇರಿದಂತೆ ಇತರೆಡೆಯೂ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇವರು ಶ್ರೀರಾಮುಲು ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.  ಸುಮಾರು ಎರಡು ತಾಸುಗಳಿಗೂ ಹೆಚ್ಚು ಕಾಲ ತಪಾಸಣೆ ನಡೆಸಿ ಕೆಲ ಪ್ರಶ್ನೆಗಳ ಪಟ್ಟಿಗಳನ್ನು ನೀಡಿ ಅಲ್ಲಿಂದ ಅಧಿಕಾರಿಗಳು ತೆರಳಿದ್ದಾರೆ.

LEAVE A REPLY

Please enter your comment!
Please enter your name here