ಮೋದಿ ಸರಕಾರವು ಜನರನ್ನು ಬದುಕಿಸುತ್ತಿದ್ದರೆ, ಸಿದ್ಧರಾಮಯ್ಯ ಸರಕಾರ ಜನರನ್ನು ಕೊಲ್ಲುತ್ತಿದೆ: ಅಮಿತ್ ಶಾ!

0
529

ನ್ಯೂಸ್ ಕನ್ನಡ ವರದಿ(20-04-2018): ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಜನರನ್ನು ಬದುಕಲು ಪ್ರೇಪಿಸುತ್ತಿದ್ದರೆ ಸಿದ್ಧರೀಮಯ್ಯ ನೇತೃತ್ವದ ರಾಜ್ಯ ಸರಕಾರವು ಜನರನ್ನು ಕೊಲ್ಲುತ್ತಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಆರೋಪಿಸಿದ್ದಾರೆ.

ಬೆಂಗಳೂರಿನ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ರಾಜ್ಯ ಸರಕಾರದ ಬಹುತೇಕ ಸಚಿವರು ಭ್ರಷ್ಟಾಚಾರದಲ್ಲಿ ಪಳಗಿದವರಾಗಿದ್ದಾರೆ. ಸಚಿವರಾದ ಡಿ.ಕೆ.ಶಿವ ಕುಮಾರ್, ಕೆ.ಜೆ.ಜಾರ್ಜ್ ಹಾಗೂ ಕೃಷ್ಣಪ್ಪನಂತವರು ಭ್ರಷ್ಟಾಚಾರದ ಮೆಡಲ್ ಹಾಕಿಕೊಂಡು ಸರಕಾರದಲ್ಲಿ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕೆಲವು ವರ್ಷಗಳ ಹಿಂದೆ ದೇಶದಲ್ಲಿ ಕೇವಲ ಬೆರಳಣಿಕೆಯಷ್ಟು ಶಾಸಕರು ಹಾಗೂ ಸಂಸದರಿದ್ದ ನಮ್ಮ ಪಕ್ಷವು ಈಗ ದೇಶದಲ್ಲಿ 20 ರಾಜ್ಯಗಳಲ್ಲಿ ಅಧಿಕಾರ ಪಡೆಯುವುದರೊಂದಿಗೆ ದೇಶದ ಅತೀ ದೊಡ್ಡ ಪಕ್ಷವಾಗಿದೆ ಎಂದರು.

LEAVE A REPLY

Please enter your comment!
Please enter your name here