ನ್ಯೂಸ್ ಕನ್ನಡ ವರದಿ-(13.04.18): ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ತಂಡದ ವಿರುದ್ಧ ಸೋಲನ್ನಪ್ಪಿಕೊಂಡಿತ್ತು. ಇದೀಗ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವೆ ಪಂದ್ಯ ನಡೆಯುತ್ತಿದೆ. ಇದೀಗ ಪ್ರಥಮ ಬ್ಯಾಟಿಂಗ್ ಮಾಡಿದ ಕಿಂಗ್ಸ್ ಇಲೆವೆನ್ ಪಂಜಾಬ್ 19.2 ಓವರ್ ಗಳಲ್ಲಿ 155 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಮೊದಲು ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಸ್ಫೋಟಕ ಆರಂಭವನ್ನೇ ಪಡೆಯಿತು. ಕನ್ನಡಿಗ ಕೆ,ಎಲ್ ರಾಹುಲ್ ಭರ್ಜರಿ 47 ರನ್ ಗಳಿಸಿದರು. ಉಮೇಶ್ ಯಾದವ್ ತಮ್ಮ ಮಾರಕ ಬೌಲಿಂಗ್ ದಾಳಿಯಿಂದ ಪಂಜಾಬ್ ತಂಡದ ಪ್ರಮುಖ ಮೂರು ವಿಕೆಟ್ ಗಳನ್ನು ಒಂದೇ ಓವರ್ ನಲ್ಲಿ ಉರುಳಿಸಿದರು. ಕರುಣ್ ನಾಯರ್(29) ಮತ್ತು ಆರ್.ಅಶ್ವಿನ್ (23) ರನ್ ದಾಖಲಿಸಿದರು. ಬೇರೆ ಯಾರೂ ಉತ್ತಮ ಪ್ರದರ್ಶನವನ್ನು ತೋರಲಿಲ್ಲ. ಬೌಲಿಂಗ್ ನಲ್ಲಿ ಉಮೇಶ್ ಯಾದವ್ 3 ವಿಕೆಟ್, ಕುಲವಂತ್ ಕೇಜ್ರೋಲಿಯಾ 2 ವಿಕೆಟ್ ಹಾಗೂ ವಾಷಿಂಗ್ಟನ್ ಸುಂದರ್ ಎರಡು ವಿಕೆಟ್ ಪಡೆದು ಮಿಂಚಿದರು.