ಮಹಿಳಾ ಜರ್ನಲಿಸ್ಟ್ ಗಳು ಕೆಲಸಕ್ಕಾಗಿ ಕಂಪೆನಿ ಮಾಲಕರೊಂದಿಗೆ ಮಲಗುತ್ತಾರೆ: ತಮಿಳುನಾಡು ಬಿಜೆಪಿ ಮುಖಂಡ!

0
757

ನ್ಯೂಸ್ ಕನ್ನಡ ವರದಿ-(20.04.18): ತಮಿಳುನಾಡಿನ ರಾಜ್ಯಪಾಲರಾಗಿರುವ ಬನ್ವರಿಲಾಲ್ ಪುರೋಹಿತ್ ಮಹಿಳಾ ಪತ್ರಕರ್ತೆಯೋರ್ವ ಕೆನ್ನೆ ಸವರಿದ್ದು ಬಹುದೊಡ್ಡ ವಿವಾದವಾಗಿತ್ತು. ಈ ವಿವಾದಕ್ಕೆ ಪ್ರತಿಯಾಗಿ ಬನ್ವರೀಲಾಲ್ ಕ್ಷಮೆ ಕೇಳಿದ್ದು ವಿವಾದ ತಣ್ಣಗಾಗುವ ಹೊತ್ತಿನಲ್ಲೇ ಇದೀಗ ಇನ್ನೊಂದು ವಿವಾದವು ಭುಗಿಲೆದ್ದಿದೆ. ರಾಜ್ಯಪಾಲರು ಕೆನ್ನೆ ಸವರಿದ ಪ್ರಕರಣವನ್ನೇ ಮುಂದಿಟ್ಟುಕೊಂಡು ತಮಿಳುನಾಡಿನ ಬಿಜೆಪಿ ಮುಖಂಡ ಎಸ್.ವಿ.ಇ ಶೇಖರ್, ಮಹಿಳಾ ಜರ್ನಲಿಸ್ಟ್ ಗಳು ಆಂಕರ್, ಪತ್ರಕರ್ತೆಯರಾಗಲು ಕಂಪೆನಿಯ ಮಾಲಕರೊಂದಿಗೆ ಮಲಗುತ್ತಾರೆ ಎಂಬ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ. ಈ ಕುರಿತಾದಂತೆ ಸಾಮಾಜಿಕ ಜಾಲತಾಣದಾದ್ಯಂತ ಇದೀಗ ಆಕ್ರೋಶ ವ್ಯಕ್ತವಾಗಿದೆ.

ಗುರುವಾರದಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಿರುಮಲೈ ಎಸ್.ಎ ಎಂಬವರು ಬರೆದಿದ್ದ ಪೋಸ್ಟ್ ಒಂದನ್ನು ಶೇಖರ್ ಪ್ರಕಟಿಸಿದ್ದರು. ಈ ಪೋಸ್ಟ್ ಗೆ ಮಧುರೈ ಯುನಿವರ್ಸಿಟಿ, ಗವರ್ನರ್ ಆ್ಯಂಡ್ ವರ್ಜಿನ್ ಗಲ್ಸ್ ಚೀಕ್ ಎಂಬ ತಲೆಬರಹ ನೀಡಲಾಗಿತ್ತು. ಈ ಪೋಸ್ಟ್ ನಲ್ಲಿ ಮಹಿಳಾ ಪತ್ರಕರ್ತೆಯ ಹೆಸರು ನಮೂದಿಸದೇ, ” ನಾನು ಮಹಿಳಾ ಜರ್ನಲಿಸ್ಟ್ ಗಳ ಕುರಿತು ಮರುಕ ವ್ಯಕ್ತಪಡಿಸುತ್ತೇನೆ. ಗವರ್ನರ್ ಆಕೆಯನ್ನು ಮುಟ್ಟಿದ್ದು ಆಕೆಯನ್ನು ದುಃಖಕ್ಕೀಡು ಮಾಡಲಾಗಿದೆ ಎನ್ನಲಾಗಿದೆ. ಆದರೆ ಆಕೆಯ ಹಳೆಯ ಟ್ವೀಟ್ ಗಳನ್ನು ನೊಡುವಾಗ ಆಕೆಗಿದ್ದ ಉದ್ದೇಶ ನರೇಂದ್ರ ಮೋದಿ ಮತ್ತು ಗವರ್ನರ್ ರನ್ನು ಟೀಕಿಸುವುದು ಮಾತ್ರವಾಗಿತ್ತು.”

ನಿಜ ಹೇಳಬೇಕೆಂದರೆ ಆ ಪತ್ರಕರ್ತೆಯನ್ನು ಮುಟ್ಟಿದ್ದಕ್ಕಾಗಿ ರಾಜ್ಯಪಾಲರು ಫಿನಾಯಿಲ್ ಹಾಕಿ ಕೈ ತೊಳೆದುಕೊಳ್ಳಬೇಕು. ತಮಿಳುನಾಡಿನ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಹಲವರು ಶಿಕ್ಷಣವೇ ಇಲ್ಲದ ವ್ಯಕ್ತಿಗಳು. ಇನ್ನು ಮಹಿಳಾ ಜರ್ನಲಿಸ್ಟ್ ಗಳು ಉದ್ಯೋಗ ಸ್ಥಳದಲ್ಲಿ ಆ್ಯಂಕರಿಂಗ್ ಅಥವಾ ಇನ್ನಿತರ ಉದ್ಯೋಗ ಪಡೆಯಲಿಕ್ಕೋಸ್ಕರ ತಮ್ಮ ಕಂಪೆನಿಯ ಮಾಲಕರೊಂದಿಗೆ ಮಲಗುತ್ತಾರೆ ಎಂಬ ವಿವಾದಾತ್ಮಕ ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ಗೆ ಉತ್ತರಗಳು ಬರುತ್ತಿದ್ದಂತೆ ಪೋಸ್ಟ್ ಡಿಲೀಟ್ ಮಾಡಲಾಗಿದೆ. ಇದೀಗ ಸಾಮಾಜಿಕ ತಾಣದಾದ್ಯಂತ ಬಿಜೆಪಿ ಮುಖಂಡ ಶೇಖರ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

LEAVE A REPLY

Please enter your comment!
Please enter your name here