ಬಿಜೆಪಿಯು ದೇಶಕ್ಕೆ ದಂಡೆತ್ತಿ ಬಂದಿದೆಯೇ ಹೊರತು ಆಡಳಿತ ಮಾಡೋದಕ್ಕಲ್ಲ: ಪ್ರಕಾಶ್ ರೈ

0
496

ನ್ಯೂಸ್ ಕನ್ನಡ ವರದಿ-(21.04.18): ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಪ್ರಕಾಶ್ ರೈ, ಹಿಂದಿನಂತೆ ಇಂದೂ ಕೂಡ ಬಿಜೆಪಿಯ ಧರ್ಮ ರಾಜಕಾರಣದ ಮೇಲೆ ಹರಿಹಾಯ್ದರು. ಮಾತು ಹತ್ತಿಕ್ಕುವ ಕಾರ್ಯದಲ್ಲಿ ಬಿಜೆಪಿಯ ಕಾಲಾಳುಗಳು ನಿರತರಾಗಿದ್ದಾರೆ, ಪ್ರಶ್ನೆ ಮಾಡುವವರ ಮೇಲೆ ಮಾನಸಿಕ, ದೈಹಿಕ ದಾಳಿಗಳನ್ನು ವ್ಯವಸ್ಥಿತವಾಗಿ ಸಂಘಟಿಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿಯ ಧ್ಯೇಯಗಳು ಹೆದರಿಸುವಂತಿವೆ ಎಂದ ಪ್ರಕಾಶ್ ರೈ, ಬಿಜೆಪಿಯವರು ಕಾಂಗ್ರೆಸ್‌ ಮುಕ್ತ ಮಾಡಿ ಹಿಟ್ಲರ್ ಆಡಳಿತ ಹೇರಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯವರು ಇಡೀ ದೇಶ ಗೆಲ್ಲುವ ಕನಸು ಕಣಾತ್ತಿದ್ದಾರೆ, ಎಲ್ಲಾ ರಾಜ್ಯಗಳಲ್ಲಿ ನಮ್ಮದೇ ಆಡಳಿತ ಇರಬೇಕೆಂದು ಹಠ ತೊಟ್ಟಿದ್ದಾರೆ. ಇವರೇನು ಆಡಳಿತ ಮಾಡಲು ಬಂದಿದ್ದಾರೊ ಅಥವಾ ದೇಶದ ಮೇಲೆ ದಂಡೆತ್ತಿ ಬಂದಿದ್ದಾರೊ ಗೊತ್ತಾಗುತ್ತಿಲ್ಲ ಎಂದು ಪ್ರಕಾಶ್ ರೈ ಹೇಳಿದರು.

LEAVE A REPLY

Please enter your comment!
Please enter your name here