ಮಕ್ಕಾದ ಪವಿತ್ರ ಮಣ್ಣಿನಲ್ಲಿ ಇಂಡಿಯನ್ ಫೆಟರ್ನಿಟಿ ಫಾರಂ ಇದರ ಕರ್ನಾಟಕ ಚಾಪ್ಟರ್ ವತಿಯಿಂದ ಭಾರತೀಯ ಹಜ್ಜಾಜುಗಳ ವಾಸ ಸ್ಥಳ ಅಝೀಝಿಯಾದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮವನ್ನು ಯೂಸುಫ್ ಮಿಸ್ಭಾಯಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಪಾಪ್ಯುಲರ್ ಫ್ರಂಟ್ ಅಫ್ ಇಂಡಿಯಾ ರಾಜ್ಯಧ್ಯಕ್ಷರಾದ ಶಾಕೀಬ್ , ಭಾರತದ ಪ್ರಸಕ್ತ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶಗಳನ್ನು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಬೃಹತ್ ಬೆಂಗಳೂರ್ ಮಾಹನಗರ ಪಾಲಿಕೆಯ ಸದಸ್ಯರೂ ಆರೋಗ್ಯ ಸ್ಥಾಯೀ ಸಮಿತಿಯ ಅಧ್ಯಕ್ಷರೂ ಆಗಿರುವ ಮುಜಾಹಿದ್ ಪಾಷ ಹಜ್ಜಾಜುಗಳ ಜೊತೆ ಸಂವಹನ ನಡೆಸಿ ಮಾತಾಡಿದರು.
ಐಎಫ್ಎಫ್ ಮಕ್ಕಾ ಚಾಪ್ಟರ್ ಅಸಿಸ್ಟೆಂಟ್ ಕೊರ್ಡಿನೇಟರ್ ಶಾಕೀರ್ ಹಕ್ ನೆಲ್ಯಾಡಿ ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದರು . ಉಬೈದುಲ್ಲಾ ಬಂಟ್ವಾಳ ಕಾರ್ಯಕ್ರಮವನ್ನು ನಿರೂಪಿಸಿ ಸ್ವಾಗತಿಸಿದರು.