ಲಂಡನ್ ನಲ್ಲಿ ಪ್ರಧಾನಿ ಮೋದಿಗೆ ಪ್ರತಿಭಟನೆಯ ಸ್ವಾಗತ ಕೋರಿದ ಅನಿವಾಸಿ ಭಾರತೀಯರು!

0
872

ನ್ಯೂಸ್ ಕನ್ನಡ ವರದಿ-(18.04.18): ಒಂದೆಡೆ ದೇಶಾದ್ಯಂತ ದಿನೇದಿನೇ ಹಲವಾರು ಅತ್ಯಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಕಥುವಾ ಅತ್ಯಾಚಾರ ಪ್ರಕರಣ ಮತ್ತು ಉನ್ನಾವ್ ಅತ್ಯಾಚಾರ ಪ್ರಕರಣಗಳು ಹೆಚ್ಚು ಸದ್ದು ಮಾಡುತ್ತಿವೆ. ಮೊದಲು ಈ ಕುರಿತು ಮಾತನಾಡದ ಪ್ರಧಾನಿ ಮೋದಿ ಬಳಿಕ ಒತ್ತಡ ಹೆಚ್ಚಾದಂತೆ ಈ ಕುರಿತು ಮಾತನಾಡಿದ್ದರು. ಈ ನಡುವೆ ಇದೀಗ ವಿದೇಶ ಪ್ರವಾಸಕ್ಕೆಂದು ತೆರಳಿರುವ ಪ್ರಧಾನಿ ಮೋದಿಗೆ ಲಂಡನ್ ನಲ್ಲಿ ಪ್ರತಿಭಟನೆಯ ಸ್ವಾಗತ ಎದುರಾಗಿದೆ. ಚಿತ್ರವಿಚಿತ್ರ ಘೋಷಣೆಗಳು ಮತ್ತು ಕಟೌಟ್ ಗಳ ಮೂಲಕ ಸ್ವಾಗತ ಕೋರಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಲಂಡನ್ ಗೆ ಆಗಮಿಸುವ ಸಂದರ್ಭದಲ್ಲೇ ಪ್ರತಿಭಟನೆ ಎದುರಾಗಿದೆ. ಪ್ರಧಾನಿ ಮೋದಿಯ ಆಡಳಿತದಲ್ಲಿ 8 ವಯಸ್ಸಿನ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಲಾಗಿದೆ, ನರೇಂದ್ರ ಮೋದಿ ಭಾರತೀಯ ಭಯೋತ್ಪಾದನೆಯ ಮುಖ, ಮೋದಿ, ಭಾರತದಲ್ಲಿ ಅಲ್ಪಸಂಖ್ಯಾತರನ್ನು ಕೋಲ್ಲುವುದು ನಿಲ್ಲಿಸಿ, ಭಾರತೀಯ ಭಯೋತ್ಪಾದನೆಯನ್ನು ನಿಲ್ಲಿಸಿ, ಜಸ್ಟಿಸ್ ಫಾರ್ ಆಸಿಫಾ, ಮೋದಿ ನಿಮ್ಮ ಕೈಗಳಲ್ಲಿ ರಕ್ತದ ಕಲೆಯಿದೆ, ಮೋದಿ ಭಾರತದ ಪ್ರೈಮ್ ಮರ್ಡರರ್ ಎಂಬ ಪ್ಲೇಕಾರ್ಡ್ ಳನ್ನು ಹಿಡಿದು ಸಾವಿರಾರು ಅನಿವಾಸಿ ಭಾರತೀಯರು ಪ್ರತಿಭನೆ ನಡೆಸಿದರು.

LEAVE A REPLY

Please enter your comment!
Please enter your name here