ನ್ಯೂಸ್ ಕನ್ನಡ ವರದಿ-(10.04.18): ಪ್ರಧಾನಿ ನರೇಂದ್ರ ಮೋದಿ ಭಾರತದ ಆಡಳಿತ ಚುಕ್ಕಾಣಿಯನ್ನು ಹಿಡಿದ ಸಂದರ್ಭದಲ್ಲಿ ಗೋಮಾಂಸವನ್ನು ನಿಷೇಧಿಸಬಹುದು ಎಂಬ ಮಾತುಗಳು ಕೇಳಿ ಬರುತ್ತಿತ್ತು. ಆದರೆ ವರ್ಷ ಕಳೆದಂತೆ ವಿದೇಶಕ್ಕೆ ರಫ್ತಾಗುವ ಗೋಮಾಂಸದ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಇದೀಗ ಗೋಮಾಂಸ ನಿಷೇಧದ ಕುರಿತು ಮಾತನಾಡಿದ ರಾಜ್ಯ ಆಹಾರ ಮತ್ತು ನಾಗರಿಕ ಸಚಿವ ಯುಟಿ ಖಾದರ್, ಒಮದು ವೇಳೆ ಕೇಂದ್ರ ಸರಕಾರವು ಗೋಹತ್ಯೆ ನಿಷೇಧ ಮಾಡುತ್ತದೆ ಎಂದಾದಲ್ಲಿ ರಾಜ್ಯ ಸರಕಾರ ಅದಕ್ಕೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಗೋವುಗಳ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿದ್ದಲ್ಲಿ ಕಸಾಯಿಖಾನೆಗಳನ್ನು ಮತ್ತು ವಿದೇಶಕ್ಕೆ ರಫ್ತು ಮಾಡುವ ಗೋಮಾಂಸವನ್ನು ಕೂಡಾ ನಿಲ್ಲಿಸಲಿ. ಅಂಥಹಾ ನಡೆಗೆ ನಾವು ಬೆಂಬಲ ಸೂಚಿಸುತ್ತೇನೆ ಎಂದು ಹೇಳಿದರು. ನನ್ನ ಕ್ಷೇತ್ರದಲ್ಲಿ ಗೋವುಕಳ್ಳರ ಹಾವಳಿ ಜಾಸ್ತಿಯಾಗಿದೆ ಎಂದು ಆರೋಪಿಸುತ್ತಿರುವುದು ದುರುದ್ದೇಶಪೂರಿತ ರಾಜಕೀಯ ನಡೆಯಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.