ನ್ಯೂಸ್ ಕನ್ನಡ ವರದಿ-(05.07.18): ಕಾನೂನು ಉಲ್ಲಂಘನೆ ಮಾಟಿದರೆ ನ್ಯಾಯದ ಮುಂದೆ ಪ್ರತಿಯೊಬ್ಬರೂ ಒಂದೇ, ಯಾವುದೇ ಹುದ್ದೆಯಲ್ಲಿದ್ದರೂ, ಎಷ್ಟೇ ದೊಡ್ಡ ವ್ಯಕ್ತಿಗಳಾಗಿದ್ದರೂ ದೇಶದ ಕಾನೂನಿನ ಮುಂದೆ ಮಂಡಿಯೂರಲೇಬೇಕು. ಕೆಲವು ಖ್ಯಾತ ವ್ಯಕ್ತಿಗಳು ತಪ್ಪು ಮಾಡಿದರೂ, ಅದು ತಮಗೆ ಸಂಬಂಧಿಸಿದ್ದಲ್ಲವೆಂದು ಬೆನ್ನು ಹಾಕಿ ತೆರಳುತ್ತಾರೆ. ಆದರೆ ಇದೀಗ ತಮ್ಮ ವಾಹನದಲ್ಲಿ ವೇಗದ ಮಿತಿಯನ್ನು ದಾಟಿದ್ದಕ್ಕೆ ಆ ತಪ್ಪನ್ನು ಒಪ್ಪಿಕೊಂಡು ಕೇರಳ ರಾಜ್ಯದ ರಾಜ್ಯಪಾಲ ಪಿ. ಸದಾಶಿವಂ 400ರೂ. ದಂಡವನ್ನು ಪಾವತಿ ಮಾಡಿದ್ದಾರೆ.
ಕಳೆದ ಎಪ್ರಿಲ್ 7ರಂದು ರಾಜ್ಯಪಾಲರ ಅಧಿಕೃತ ವಾಹನ ವೇಗ ಮಿತಿ ಉಲ್ಲಂಘನೆ ಮಾಡಿತ್ತು. ಆ ಕಾರಣಕ್ಕಾಗಿ ದಂಡ ಹೇರಲಾಗಿತ್ತು. ಈ ದಂಡ ಮೊತ್ತವನ್ನು ಪಾವತಿಸುವಂತೆ ರಾಜ್ಯಪಾಲರು ತನ್ನ ಕಾರ್ಯಾಲಯದ ಅಧಿಕಾರಿಗೆ ಸೂಚಿಸಿದರು. ದಂಡ ಪಾವತಿಸುವ ಮೂಲಕ ಅವರು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವ ಹೈಪ್ರೊಫೈಲ್ ವ್ಯಕ್ತಿಗಳಿಗೆ ನಿಯಮ ಪಾಲನೆಗಾಗಿ ಮಾರ್ಗದರ್ಶಿಯಾದರು.