ದೇವೇಗೌಡರನ್ನು ಭೇಟಿಯಾದ ಕೆ.ಸಿ.ರಾವ್: ತೃತೀಯ ರಂಗಕ್ಕೆ ಮುನ್ನುಡಿ!

0
428

ನ್ಯೂಸ್ ಕನ್ನಡ.ವರದಿ(13-04-2018): ತೆಲಂಗಾಣ ಮುಖ್ಯಮಂತ್ರಿ ಹಾಗೂ ಹೊಸ ತೃತೀಯ ರಂಗದ ಕನಸನ್ನು ನನಸು ಮಾಡಲು ಹೊರಟ ಕೆ.ಚಂದ್ರ ಶೇಖರ ರಾವ್ ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ತೆಲಂಗಾಣ ಮುಖ್ಯಮಂತ್ರಿ ಚಂದ್ರ ಶೇಖರ ರಾವ್ ಅವರಿಗೆ ಚಿತ್ರ ನಟ ಪ್ರಕಾಶ್ ರೈ ಸಾಥ್ ನೀಡಿದರು. ಮಾತುಕತೆಯ ವೇಳೆ ಉಭಯ ನಾಯಕರು ಕರ್ನಾಟಕದ ಚುನಾವಣೆಯಲ್ಲಿ ಜೆಡಿಎಸ್ ಗೆ ತೆಲುಗು ಭಾಷಿಗರ ಬೆಂಬಲದ ಕುರಿತು ಸೇರಿದಂತೆ ರಾಷ್ಟ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸೇತರ ತೃತೀಯ ರಂಗದ ಕುರಿತು ಚರ್ಚಿಸಿದರು.

ತೃತೀಯ ರಂಗದ ನೇತೃತ್ವವನ್ವು ವಹಿಸಲು ಸಿದ್ಧರಾಗಿರುವ ಕೆ.ಸಿ.ರಾವ್ ಪಶ್ಚಿಮ ಬಂಗಾಲ ಹಾಗೂ ಜಾರ್ಖಂಡ್ ಪ್ರವಾಸಗೈಯಲಿದ್ದು, ಮಮತಾ ಬ್ಯಾನರ್ಜಿ ಸೇರಿದಂತೆ ಅಲ್ಲಿನ ಪ್ರಾದೇಶಿಕ ಪಕ್ಷಗಳ ನಾಯಕರೊಂದಿಗೆ ಚರ್ಚಿಸಲಿದ್ದಾರೆಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here