ನ್ಯೂಸ್ ಕನ್ನಡ ವರದಿ: ದೇಶವನ್ನೇ ತಲ್ಲಣಗೊಳಿಸಿದ್ದ ಫುಲ್ವಾಮಾ ಭಯೋತ್ಪಾದಕರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಸುಳಿ ವೈಮಾನಿಕ ದಾಳಿ ನಡೆಸಿ ಉಗ್ರರ ಅಡಗುತಾಣವನ್ನು ದ್ವಂಸಗೊಳಿಸಿರುವುದಕ್ಕೆ ದೇಶಾದ್ಯಂತ ಸಂಭ್ರಮಾಚರಿಸಲಾಗುತ್ತಿದೆ. ಅದೇ ರೀತಿ ಭಾರತೀಯ ಸೈನ್ಯಕ್ಕೆ ಹುತಾತ್ಮ ಗುರು ಪತ್ನಿ ಕಲಾವತಿ ಅವರು ಸೆಲ್ಯೂಟ್ ಹೊಡೆದು ವಂದಿಸಿ ಗೌರವ ಸಲ್ಲಿಸಿದ್ದಾರೆ.
ಮೊದಲಿಗೆ ನಾನು ಭಾರತೀಯ ಸೈನ್ಯಕ್ಕೆ ಸೆಲ್ಯೂಟ್ ಹೊಡೆಯುತ್ತೇನೆ ಎಂದು ಸೆಲ್ಯೂಟ್ ಮಾಡಿದ್ದಾರೆ. ಉಗ್ರರು ಎಲ್ಲೆಲ್ಲಿ ಅಡಗಿದ್ದಾರೆ ತಿಳಿದುಕೊಂಡು ಅವರನ್ನು ಬಿಡಬಾರದು. ನಮ್ಮ ಸರ್ಕಾರಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ ಎಂದ ಯೋಧ ಗುರು ಪತ್ನಿ ಕಲಾವತಿ, ನಮ್ಮ ಸೈನಿಕರಿಗೆ ಇಷ್ಟನ್ನು ಧೈರ್ಯ, ಶಕ್ತಿ ಕೊಡಲಿ. ಜೊತೆಗೆ ಅವರಿಗೆ ಆರೋಗ್ಯ, ಆಯಸ್ಸು ಕೊಟ್ಟು ಕಾಪಾಡಲಿ. ಸೈನಿಕರೆಲ್ಲರೂ ಚೆನ್ನಾಗಿರಲಿ ಎಂದು ಪ್ರಾರ್ಥಿಸಿದರು. ನಮ್ಮ ಸೈನಿಕರ ಬಗ್ಗೆ ನಾನು ತುಂಬಾ ಹೆಮ್ಮೆ ಪಡುತ್ತೇನೆ. ಅವರಿಗೆ ಗೌರವ ಕೊಡುತ್ತೇನೆ ಎಂದರು.