ವಾಘಾ ಗಡಿಯಲ್ಲಿ ಭಾರತೀಯ ಸೈನಿಕರ ಮುಂದೆ ಅಸಭ್ಯವಾಗಿ ವರ್ತಿಸಿ ಅವಮಾನ ಮಾಡಿದ ಪಾಕ್ ಕ್ರಿಕೆಟಿಗ ಹಸನ್ ಅಲಿ!

0
800

ನ್ಯೂಸ್ ಕನ್ನಡ ವರದಿ-(22.04.18): ಪಾಕಿಸ್ತಾನದ ಕ್ರಿಕೆಟಿಗರಿಗೆ ದೇಶಪ್ರೇಮ ಉಕ್ಕಿ ಹರಿಯಬೇಕಾದರೆ ಭಾರತವನ್ನು ತೆಗಳೇಬೇಕು ಎನ್ನುವ ನಿಯಮವೇನಾದರೂ ಹೊಸದಾಗಿ ಸೇರ್ಪಡೆಯಾಗಿದೆಯಾ ಎಂಬ ಸಂದೇಹ ಉಂಟಾಗುತ್ತಿದೆ. ಮೊನ್ನೆ ತಾನೇ ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಕಾಶ್ಮೀರದಲ್ಲಿ ಭಾರತೀಯ ಯೋಧರು ರಕ್ತಪಾತ ನಡೆಸುತ್ತಿದ್ದಾರೆ ಎಂದು ಹೇಳಿದ್ದರು. ಇದೀಗ ಪಾಕಿಸ್ತಾಣದ ಇನ್ನೋರ್ವ ಆಟಗಾರ, ವೇಗದ ಬೌಲರ್ ಹಸನ್ ಅಲಿ ಒಂದು ಹೆಜ್ಜೆ ಮುಂದೆಯೇ ಹೋಗಿದ್ದು, ತನ್ನ ಅಜ್ಞಾನದ, ಸಾಮಾನ್ಯ ಜ್ಞಾನದ ಕೊರತೆಯನ್ನು ಭಾರತೀಯ ಯೋಧರ ಮುಂದೆ ಪ್ರದರ್ಶಿಸಿ ಸಾಮಾಜಿಕ ತಾಣದೆಲ್ಲೆಡೆ ತಪರಾಕಿ ತಿನ್ನುತ್ತಿದ್ದಾನೆ.

ವಾಘಾ ಗಡಿಯಲ್ಲಿ ಭಾರತೀಯ ಮತ್ತು ಪಾಕಿಸ್ತಾನ ಸೈನಿಕರ ಧ್ವಜವಂದನೆ ಕಾರ್ಯಕ್ರಮ ಇರುತ್ತದೆ. ಈ ಕಾರ್ಯಕ್ರಮವನ್ನು ವೀಕ್ಷಿಸಿ ಉಭಯ ದೇಶದ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ. ಅಂತೆಯೇ ಕೆಲವು ಪಾಕಿಸ್ತಾನಿ ಆಟಗಾರರನ್ನು ಕೂಡಾ ಆಹ್ವಾನಿಸಲಾಗಿತ್ತು. ಆದರೆ ತನ್ನ ಕುತಂತ್ರಿ ಪಾಕಿಸ್ತಾನಿ ಬುದ್ಧಿಯನ್ನು ವಾಘಾ ಗಡಿಯಲ್ಲೂ ಬಿಡದ ಪಾಕಿಸ್ತಾನದ ಆಟಗಾರ ಹಸನ್ ಅಲಿ, ಭಾರತೀಯ ಯೋಧರ ಮುಂದೆ ತೊಡೆ ತಟ್ಟಿಕೊಂಡು ಅಸಭ್ಯವಾಗಿ ವರ್ತಿಸಿದ್ದಾನೆ. ಗಡಿಯಲ್ಲಿ ಧ್ವಜವಂದನೆ ನಡೆಯುತ್ತಿರುವಾಗ ಓರ್ವ ಮಾನಸಿಕ ಅಸ್ವಸ್ಥ ಕೂಡಾ ಈ ಮಟ್ಟಕ್ಕೆ ಅತಿರೇಕದ ವರ್ತನೆ ತೋರಲಾರ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ. ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣಗಳಾದ್ಯಂತ ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಂತೂ ಹಸನ್ ಅಲಿಗೆ ಮಂಗಳಾರತಿ ಎತ್ತಲಾಗಿದೆ.

LEAVE A REPLY

Please enter your comment!
Please enter your name here