ಗಲ್ಫ್ ನಲ್ಲಿರುವ ಸ್ನೇಹಿತರ ಪಾರ್ಸೆಲ್ ಕೊಂಡು ಹೋಗುತ್ತೀರಾ? ಅದಕ್ಕೂ ಮುನ್ನ ಈ ಸುದ್ದಿ ತಪ್ಪದೇ ಓದಿ!

0
894

ನ್ಯೂಸ್ ಕನ್ನಡ ವರದಿ-(12.04.18): ಗಲ್ಫ್ ಗೆ ಪಾರ್ಸೆಲ್ ಕಳುಹಿಸುವ ಸಂದರ್ಭದಲ್ಲಿ ಆಗುವ ಅನಾಹುತಗಳ ಕುರಿತು ಈಗಾಗಲೇ ಸಾಮಾಜಿಕ ಜಾಲತಾಣಗಳ ಮೂಲಕ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಇದುವರೆಗೆ ಎಲ್ಲೆಲ್ಲೂ ನಡೆದ ಕೆಲವು ಘಟನೆಗಳನ್ನು ಕೇಳುತ್ತಿದ್ದ ನಮ್ಮ ಮನೆಯ ಬಾಗಿಲ ಬುಡಕ್ಕೇ ಇಂತಹಾ ಪರಿಸ್ಥಿತಿಯು ಬಂದು ತಲುಪಿದೆ ಎನ್ನುವುದು ನಿಜಕ್ಕೂ ಶೋಚನೀಯ. ಹೌದು ಉಡುಪಿ ಜಿಲ್ಲೆಯ ಪಡುಬಿದ್ರಿ ಸಮೀಪದ ಹೆಜಮಾಡಿ ಎಂಬಲ್ಲಿನ ವ್ಯಕ್ತಿಯೋರ್ವರು ಸೌದಿ ಅರೇಬಿಯಾಕ್ಕೆ ತೆರಳುವ ವೇಳೆ ಅವರ ಬಳಿ ಬೇರೊಬ್ಬರು ನೀಡಿದ್ದ ಪಾರ್ಸೆಲ್ ಒಂದರಲ್ಲಿ ಮಾದಕ ವಸ್ತು ಪತ್ತೆಯಾಗಿದೆ.

ಹೆಜಮಾಡಿ ನಿವಾಸಿ ನೂರ್ ಎಂಬವರು ಸೌದಿ ಅರೇಬಿಯಾದ ಜುಬೈಲ್ ನಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದು, ಅವರು ಊರಿನಿಂದ ಸೌದಿಗೆ ಮರಳುವ ವೇಳೆ ಕೆಲವು ಸ್ನೇಹಿತರು ಪಾರ್ಸೆಲ್ ತರಲು ಹೇಳಿದ್ದರು. ಅದರಂತೆಯೇ ಊರಿನಲ್ಲಿದ್ದ ಸ್ನೇಹಿತನೋರ್ವ ಪೇಡಾ ನೀಡಿದ್ದ. ಪ್ಯಾಕ್ ಮಾಡುವ ಸಂದರ್ಭದಲ್ಲಿ ನೂರ್ ಈ ಪಾರ್ಸೆಲ್ ಅನ್ನು ಪರಿಶೀಲಿಸಿ ನೋಡಿದಾಗ ಪೇಡಾದ ಒಳಗೊಂದು ಮಾತ್ರೆಯಿದ್ದದ್ದು ಕಂಡುಬಂದಿದೆ. ಪರಿಶೀಲನೆಯ ವೇಳೆ ಅದು ಮಾದಕ ವಸ್ತುವೆಂದು ತಿಳಿದು ಬಂದಿದೆ.

ಸೌದಿ ಅರೇಬಿಯಾಕ್ಕೆ ತೆರಳುವ ವೇಳೆ ನೂರ್ ಮಾತ್ರೆಗಳನ್ನು ಹೊರತುಪಡಿಸಿ ಕೇವಲ ಪೇಡಾವನ್ನು ಮಾತ್ರ ಕೊಂಡು ಹೋಗಿದ್ದು, ಈ ವೇಳೆ ಅಲ್ಲಿದ್ದವರು ನೂರ್ ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೊನೆಗೆ ಊರಿನಲ್ಲೆಲ್ಲಾ ಈ ಕುರಿತು ವಿಷಯ ತಿಳಿಸಿ ಇಂಥಹಾ ಗಂಭೀರ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಇಂಥಹಾ ಪ್ರಕರಣಗಳಿ ಈಗ ಅಲ್ಲಲ್ಲಿ ಕೇಳಿ ಬರಲು ಪ್ರಾರಂಭವಾಗಿದೆ. ದಯವಿಟ್ಟು ಸೌದಿ ಅರೇಬಿಯಾ, ದುಬೈ ಮುಂತಾದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವ್ಯಕ್ತಿಗಳು ಈ ಕುರಿತಾದಂತೆ ಗಂಬೀರವಾಗಿ ಚಿಂತನೆ ನಡೆಸಬೇಕಾಗಿದೆ. ಗಲ್ಫ್ ರಾಷ್ಟ್ರಗಳಲ್ಲಿ ಒಂದು ವೇಳೆ ಇಂಥಹಾ ಪ್ರಕರಣಗಳಲ್ಲಿ ಪೊಲೀಸರು ಬಂಧಿಸಿದರೆ ಶೀಘ್ರ ಬಿಡುಗಡೆಯಾಗಲು ಸಾಧ್ಯವಿಲ್ಲ. ಕೆಲವೊಮ್ಮೆ ಮಾದಕದ್ರವ್ಯ ಪ್ರಕರಣದಲ್ಲಿ ಮರಣದಂಡನೆಯನ್ನೂ ವಿಧಿಸಲಾಗುತ್ತದೆ. ಕೇರಳದ ಹಲವಾರು ಯುವಕರು ತಾವು ಮಾಡದ ತಪ್ಪಿಗಾಗಿ ಈಗಲೂ ಜೈಲುಗಲಲ್ಲಿ ಕೊಳೆಯುತ್ತಿದ್ದಾರೆ. ಆದ್ದರಿಂದ ಪ್ರತಿಯೋರ್ವರೂ ಈ ಕುರಿತಾದಂತೆ ಗಮನ ಹರಿಸಿ.

LEAVE A REPLY

Please enter your comment!
Please enter your name here