GAMCA ವೈದ್ಯಕೀಯ ಅರ್ಹತಾ ಪತ್ರದ ಮೂಲಕ ಇನ್ನು ಕುವೈಟ್ ವೀಸಾ ಪ್ರಕ್ರಿಯೆ ಸರಳ!

0
7600

ನ್ಯೂಸ್ ಕನ್ನಡ ವರದಿ-(19.04.18): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದಲ್ಲಿರುವ ಕುವೈಟ್ ರಾಯಭಾರ ಕಚೇರಿಯು ಭಾರತದಿಂದ ಉಧ್ಯೋಗ ಮತ್ತು ಕುಟುಂಬ ವಿಸಾಗಳಲ್ಲಿ ಬರುವವರಿಗೆ GAMCA ಸಂಸ್ಥೆ ನೀಡುವ ವೈಧ್ಯಕೀಯ ಅರ್ಹತಾ ಪತ್ರವನ್ನು ಮಾತ್ರ ಸ್ವೀಕರಿಸಲಾಗುವುದು ಎಂದು ಪ್ರಕಟಣೆ ಯಲ್ಲಿ ತಿಳಿಸಿದೆ. GAMCA ವೈಧ್ಯಕೀಯ ಪರೀಕ್ಷಾ ಕೇಂಧ್ರವೂ ಭಾರತಾಧ್ಯಂತ ಎಲ್ಲಾ ರಾಜ್ಯಗಳಲ್ಲೂ ಕಾರ್ಯ ನಿರ್ವಹಿಸುತಿದ್ದು, ಕರ್ನಾಟಕದ ಮಂಗಳೂರು ಮತ್ತು ಬೆಂಗಳೂರು ಗಳಲ್ಲೂ ಕಚೇರಿಗಳನ್ನು ಹೊಂದಿದೆ.

ಕಳೆದ 2015 ಇಸವಿಯಿಂದ ಭಾರತದಲ್ಲಿರುವ ಕುವೈಟ್ ರಾಯಭಾರ ಕಚೇರಿಯೂ ಕೇವಲ ಕದಾಮತ್ ಇಂಟರ್ಗೇಟೆಡ್ ಸೊಲುಷನ್ ನವರ ವೈಧ್ಯಕೀಯ ಅರ್ಹತಾ ಪತ್ರವನ್ನು ಮಾತ್ರ ಸ್ವೀಕರಿಸಿ ಕುವೈಟ್ ಉಧ್ಯೋಗ ತೆರಳುವ ಮತ್ತು ತನ್ನ ಕುಟುಂಬವನ್ನು ಸೇರುವ ಸದಸ್ಯರಿಗೆ ವಿಸಾ ಅನುಮತಿ ನೀಡುತಿತ್ತು.

ಕದಾಮತ್ ಇಂಟರ್ಗೇಟೆಡ್ ಸೊಲೂಷನ್ ಭಾರತದ ಕೇವಲ ನಾಲ್ಕು ನಗರಗಳಾದ ಕೇರಳದ ಕೊಚ್ಚಿ, ಆಂಧ್ರ ಪ್ರದೇಶದ ಹೈದ್ರಾಬಾದ್, ಮಹರಾಷ್ಟ್ರದ ಮುಂಬೈ ಮತ್ತು ನವದೆಹಲಿಯಲ್ಲಿ ಕಾರ್ಯಚರಿಸುತ್ತಿದೆ. ಇದರಿಂದ ಕುವೈಟ್ ಗೆ ತೆರಳುವ ಉಧ್ಯೋಗಾರ್ಥಿ ಮತ್ತು ಕುಟುಂಬಿಕರಿಗೆ ತುಂಬಾ ಅನಾನುಕೂಲವಾಗುತಿತ್ತು. ಇದೀಗ GAMCA ವೈಧ್ಯಕೀಯ ಅರ್ಹತಾ ಪತ್ರದ ಮೂಲಕ ಕುವೈಟ್ ವಿಸಾ ಪ್ರಕ್ರಿಯೆ ಸುಲಭವಾಗಲಿದ್ದು, ಹಲವಾರು ಜನರಿಗೆ ಪ್ರಯೋಜನವಾಗಲಿದೆ.

LEAVE A REPLY

Please enter your comment!
Please enter your name here