ಪಂದ್ಯ ನಡೆಯುತ್ತಿದ್ದ ವೇಳೆ ಮೈದಾನಕ್ಕೆ ನುಗ್ಗಿ ಧೋನಿ ಕಾಲಿಗೆ ಬಿದ್ದ CSK ಅಭಿಮಾನಿ!

0
469

ನ್ಯೂಸ್ ಕನ್ನಡ ವರದಿ-(20.04.18): ಮಹೇಂದ್ರ ಸಿಂಗ್ ಧೋನಿ ಯಾವ ತಂಡಕ್ಕೆ ಹೋದರೂ ತನ್ನ ಛಾಪನ್ನು ಮೂಡಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಭಾರತೀಯ ತಂಡದ ನಾಯಕನಾಗಿದ್ದಾಗಲೂ ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಧೋನಿ ಇದೀಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಈಗಾಗಲೇ ತಮಿಳರು ಧೋನಿಯನ್ನು ತಲೈವಾ ಎಂದೂ ಕರೆಯುತ್ತಿದ್ದಾರೆ. ಇದೀಗ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ತಾನ ರಾಯಲ್ಸ್ ನಡುವೆ ಪುಣೆಯಲ್ಲಿ ಪಂದ್ಯ ನಡೆಯುತ್ತಿದ್ದ ವೇಳೆ ಅಭಿಮಾನಿಯೋರ್ವ ಮಯದಾನಕ್ಕೆ ನುಗ್ಗಿ ಮಗೇಂದ್ರ ಸಿಂಗ್ ಧೋನಿಯ ಕಾಲಿಗೆ ಬಿದ್ದ ವೀಡಿಯೋ ವೈರಲ್ ಆಗಿದೆ.

ಮೊನ್ನೆ ತಾನೇ ಚೆನ್ನೈಯಲ್ಲಿ ಪಂದ್ಯ ನಡೆದಾಗ ತೀವ್ರ ಅಸಮಧಾನ ವ್ಯಕ್ತವಾಗಿತ್ತು. ಕಾವೇರಿ ಪ್ರತಿಭಟನೆಯ ಕಾರಣದಿಮದಾಗಿ ಹಲವರು ಪ್ರತಿಭಟನೆ ನಡೆಸಿದ್ದು ಮಾತ್ರವಲ್ಲದೇ ಕ್ರೀಡಾಂಗಣಕ್ಕೆ ಚಪ್ಪಲಿ ಎಸೆದಿದ್ದರು. ಬಳಿಕ ಚೆನ್ನೈನ ಎಲ್ಲಾ ಪಂದ್ಯಗಳನ್ನು ಬೇರೆಡೆಗೆ ವರ್ಗಾಯಿಸಲಾಗಿತ್ತು. ಮೈದಾನಕ್ಕೆ ಈ ಕಾರಣದಿಂದ ಪುಣೆಯಲ್ಲೂ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಆದರೂ ಭದ್ರತೆಯನ್ನು ಭೇಧಿಸಿ ಒಳನುಗ್ಗಿದ ಅಭಿಮಾನಿ ಧೋನಿ ಕಾಲಿಗೆ ಬಿದ್ದ ವೀಡಿಯೋ ವೈರಲ್ ಆಗಿದೆ.

LEAVE A REPLY

Please enter your comment!
Please enter your name here