ಭಾರತದಲ್ಲಿ ಪ್ರತೀ 15 ನಿಮಿಷಕ್ಕೊಮ್ಮೆ ಅಪ್ರಾಪ್ತ ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುತ್ತಾರೆ: ಕ್ರೈ ವರದಿ!

0
435

ನ್ಯೂಸ್ ಕನ್ನಡ ವರದಿ(20-04-2018): ಪ್ರತೀ 15 ನಿಮಿಷಕ್ಕೊಂದರಂತೆ ಅಪ್ರಾಪ್ತ ಮಕ್ಕಳು ಭಾರತದಲ್ಲಿ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದು, ಇದು ಕಳೆದ ಹತ್ತು ವರ್ಷಗಳಲ್ಲಿ ಶೇಖಡಾ 500 ರಷ್ಟು ಹೆಚ್ಚಾಗಿದೆ ಎಂದು ಚೈಲ್ಡ್ ರೈಟ್ಸ್ ಅ್ಯಂಡ್ ಯೂ(ಕ್ರೈ) ವರದಿ ಮಾಡಿದೆ.

ಈ ಮಕ್ಕಳ ದೌರ್ಜನ್ಯ ಪ್ರಕರಣಗಳಲ್ಲಿ ಶೇಖಡಾ 50ರಷ್ಟು ಪ್ರಕರಣಗಳು ಉತ್ತರ ಭಾರತದ ಐದು ರಾಜ್ಯಗಳಾದ ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯ ಪ್ರದೇಶ, ದೆಹಲಿ ಹಾಗೂ ಪಶ್ಚಿಮ ಬಂಗಾಳದಿಂದ ವರದಿಯಾಗುತ್ತಿದೆ ಎಂದು ಅದು ತಿಳಿಸಿದೆ.

ಕಳೆದ ಹತ್ತು ವರ್ಷಗಳ ಹಿಂದೆ ಅಂದರೆ 2006 ರಲ್ಲಿ ಭಾರತದಲ್ಲಿ 18967 ಅಪ್ರಾಪ್ತ ಮಕ್ಕಳ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದರೆ, 2016ರಲ್ಲಿ 1,06,958 ಪ್ರಕರಣಗಳು ದಾಖಲಾಗಿದ್ದು, ಕೇವಲ ಹತ್ತು ವರ್ಷಗಳ ಅಂತರದಲ್ಲಿ ಶೇಖಡಾ 500 ರಷ್ಟು ಏರಿಕೆಯಾಗಿದೆ ಎಂದು ಕ್ರೈ ವರದಿಗಳು ತಿಳಿಸಿದೆ.

LEAVE A REPLY

Please enter your comment!
Please enter your name here