ಸುರಕ್ಷಿತ ಗೆಲುವಿನ ದೃಷ್ಟಿಯಿಂದ ಸಿಎಂ ಸಿದ್ದರಾಮಯ್ಯರವರಿಗೆ ಎರಡು ಕ್ಷೇತ್ರಗಳು!: ಹೈಕಮಾಂಡ್ ನಿಧಾ೯ರ

0
393

ನ್ಯೂಸ್ ಕನ್ನಡ ವರದಿ : ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ಸಂಬಂಧ ದಿಲ್ಲಿಯಲ್ಲಿ ಮಧುಸೂಧನ ಮಿಸ್ತ್ರಿ ನೇತೃತ್ವದಲ್ಲಿ ಸ್ಕ್ರೀನಿಂಗ್ ಕಮಿಟಿ ಸಭೆಯನ್ನು ನಡೆಸಲಾಯಿತು. ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಮತ್ತು ಬಾಗಲಕೋಟ ಜಿಲ್ಲೆಯ ಬಾದಾಮಿ ಈ ಎರಡು ಕ್ಷೇತ್ರಗಳಿಂದ ಸ್ಪಧಿ೯ಸುವ ಕುರಿತು ಸಿದ್ದರಾಮಯ್ಯ ರವರು ದಿಲ್ಲಿಯ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ಸುರಕ್ಷಿತ ಗೆಲುವಿನ ದೃಷ್ಟಿಯಿಂದ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪಧಿ೯ಸಬಹುದು ಎಂದು ಸಭೆಯಲ್ಲಿ ಚಚಿ೯ಸಲಾಗಿದ್ದು, ಸಿದ್ದರಾಮಯ್ಯ ತಾವೇ ಅಂತಿಮ ನಿಣ೯ಯ ಕೈಗೊಳ್ಳುವಂತೆ ಸಭೆಯು ಸಿದ್ದರಾಮಯ್ಯ ರವರಿಗೆ ಅಧಿಕಾರ ನೀಡಿದೆ. ಈ ವಿಷಯ ಕುರಿತು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನಿದೇ೯ಶನದ ಮೇರೆಗೆ ತೀಮಾ೯ನ ಕೈಗೊಂಡಲಾಗಿದೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ರವರಿಗೆ ಎರಡು ಕ್ಷೇತ್ರ ಪ್ರಯಣಕ್ಕೆ ಹಸಿರು ನಿಶಾನೆ ತೋರಿದೆ.

ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪಧಿ೯ಸುತ್ತೇನೆ ಎಂದು ಬಹುದಿನಗಳಿಂದ ಹೇಳುತ್ತಿದ್ದ ಸಿದ್ದರಾಮಯ್ಯ ರವರು, ಒಕ್ಕಲಿಗರ ಪ್ರಾಬಲ್ಯದ ಕಾರಣ ಯಶಸ್ಸಿನ ಬಗ್ಗೆ ಅನುಮಾನ ಇರುವುದರಿಂದ ಮತ್ತೊಂದು ಕ್ಷೇತ್ರಕ್ಕೆ ಶೋಧ ನಡೆಸಿದ್ದರು. ಗುಪ್ತಚರ ಮಾಹಿತಿ ಪಟ್ಟಿಯ ಅನ್ವಯ ಬಾಗಲಕೋಟ ಜಿಲ್ಲೆಯ ಬಾದಾಮಿ ಕ್ಷೇತ್ರಗಳಿಂದ ಸ್ಪಧಿ೯ಸುವುದಾಗಿ ತೀಮಾ೯ನಿಸಲಾಗಿದೆ. ತಮ್ಮ ಆಪ್ತ ಬಳಗದ ಸಚಿವ ಎಚ್. ಎಂ ರೇವಣ್ಣ ರವರಿಗೆ ಬಾದಾಮಿ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ಕುರಿತು ಸಿದ್ದರಾಮಯ್ಯ ಕಟ್ಟುನಿಟ್ಟಾಗಿ ಹೇಳಿದ್ದಾರೆ. ಎರಡು ಕ್ಷೇತ್ರಗಳಿಂದ ಸ್ಪಧಿ೯ಸುವ ಸಿದ್ದರಾಮಯ್ಯ ರವರಿಗೆ ಯಾವ ಕ್ಷೇತ್ರ ಒಗ್ಗಲಿದೆ ಎಂಬುದು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here