ಚೀನಾದಲ್ಲಿ ಇಸ್ಲಾಮನ್ನು ಖಂಡಿಸಿ ನಾಸ್ತಿಕ ತತ್ವವನ್ನು ಪಾಲಿಸಲು ಒತ್ತಾಯ : ವಿರೋಧಿಸಿದ ಲಕ್ಷಕ್ಕೂ ಹೆಚ್ಚಿನ ಮುಸ್ಲಿಮರಿಗೆ ಚಿತ್ರ ಹಿಂಸೆ -ಆತಂಕಕಾರಿ ವಿಚಾರ ಬಹಿರಂಗ

0
813

ಅಮೇರಿಕದ ಉಯ್ಘುರ್ ಕಾರ್ಯಕರ್ತೆಯಾದ ಅಯ್ಡಿನ್ ಅನ್ವರ್ರವರ ಸಂಶೋಧನಾ ವರದಿಯ ಪ್ರಕಾರ, “ಪ್ರಸ್ತುತ ಲಕ್ಷಕ್ಕಿಂತಲೂ ಹೆಚ್ಚು ಚೀನಾ ಮುಸ್ಲಿಮರನ್ನು ಮತ್ತು ಸಾವಿರಾರು ತುರ್ಕಿಶ್ ಮುಸ್ಲಿಮರನ್ನು ಚೀನಾದ ಕಮ್ಯೂನಿಸ್ಟ್ ಸರಕಾರ ಬಂಧಿಸಿ ಸರಕಾರೀ ಪ್ರಾಯೋಜಿತ ತೀವ್ರ ನಿಗಾ ಶಿಬಿರಗಳಲ್ಲಿ ಕೂಡಿ ಹಾಕಿದೆ.
ಬಂಧಿತರಿಗೆ ಇಸ್ಲಾಮ್ ಧರ್ಮವನ್ನು ಖಂಡಿಸುವಂತೆ, ನಾಸ್ತಿಕ ಮತವನ್ನು ಸ್ವೀಕರಿಸುವಂತೆ ಮತ್ತು ಚೀನಾ ದ ಪ್ರತಿಜ್ಞೆ ನಿಷ್ಠೆಗೆ ಬದ್ಧವಾಗಿರುವಂತೆ ಒತ್ತಾಯಪಡಿಸಲಾಗುತ್ತಿದೆ. ಜೊತೆಗೆ, “ಧರ್ಮವೆಂಬುದಿಲ್ಲ,ಎಲ್ಲವೂ ಚೈನಾ ದೇಶಕ್ಕೆ ಅಥವಾ ಚೈನಾದ ಅಧ್ಯಕ್ಷರಾದ ಗ್ಸಿ ಜಿನ್ಪಿಂಗ್ ಗೆ ಸಮರ್ಪಿತ “ಎಂದು ಪ್ರತಿಜ್ಞೆ ಸ್ವೀಕರಿಸಲು ಒತ್ತಾಯಿಸುತ್ತಿದ್ದು , ತಪ್ಪಿದ್ದಲ್ಲಿ ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುತ್ತಿದೆ. ಇದನ್ನು ವಿರೋಧಿಸುವ ಬಂಧಿತರಿಗೆ ಯಾವುದೇ ಕರುಣೆಯಿಲ್ಲದೆ ಚಿತ್ರಹಿಂಸೆ ನೀಡಲಾಗುತ್ತಿದೆ.

ಈ ಶಿಬಿರದಲ್ಲಿ ಸುಮಾರು 8 ಲಕ್ಷಗಳಷ್ಟು ಮುಸ್ಲಿಮರನ್ನು ಬಂಧಿಸಲಾಗಿದ್ದು, ಉಗುರು- ಹಲ್ಲುಗಳನ್ನು ಕಿತ್ತೆಗೆಯಲಾಗುತ್ತಿದೆ. ಹಾವುಗಳನ್ನು ಮುಂದಿಟ್ಟು ಪ್ರಶ್ನಿಸಲಾಗುತ್ತದೆ. ಜೀವ ಹೋಗುವಂತೆ ಹೊಡೆಯಲಾಗುತ್ತಿದೆ ಹಾಗೂ ಟೈಗರ್ ಛೇರ್ ಎಂಬುದರಲ್ಲಿ ಏಕಾಂಗಿಯಾಗಿ ಗಂಟೆಗಟ್ಟಲೆ ಕುಳ್ಳಿರಿಸಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ.

ಬೇರೆ ಬೇರೆ ಕಾರಣಗಳಿಗಾಗಿ ಚೈನಾ ಮುಸ್ಲಿಮರನ್ನು ಬಂಧಿಸಿ ಈ ಶಿಬಿರಗಳಲ್ಲಿ ಕೂಡಿ ಹಾಕಲಾಗುತ್ತದೆ . ಬರೀ ದೇವರ ಹೆಸರಲ್ಲಿ ಪ್ರಾರ್ಥಿಸಿದ್ದಲ್ಲಿ ಖೈದಿಯನ್ನಾಗಿ ಮಾಡಲಾಗುತ್ತಿದೆ. ಇಲ್ಲಿ ಚಿತ್ರ ಹಿಂಸೆ ಮುಗಿದ ಬಳಿಕ ಬದುಕುಳಿದರೆ ಅವರನ್ನು ಬೇರೆ ಅಧಿಕೃತ ಜೈಲುಗಳಿಗೆ ವರ್ಗಾಯಿಸಲಾಗುತ್ತದೆ.

ನನ್ನೊಬ್ಬ ಸಂಬಂಧಿಕರು 2017ರಲ್ಲಿ ಈ ಶಿಬಿರದಲ್ಲಿ ಖೈದಿಯಾಗಿದ್ದು, ಕಳೆದ ನವೆಂಬರ್ ನಲ್ಲಿ ಸಾವನ್ನಪ್ಪಿದ್ದಾನೆ. 2014 ರಲ್ಲಿ ಇನ್ನೊಬ್ಬ ಸಂಬಂಧಿಕ ಮದುವೆ ಸಮಾರಂಭಕ್ಕೆಂದು ಹೋಗಿ ಅಲ್ಲಿ ಬಂಧನಕ್ಕೊಳಗಾಗಿದ್ದ. ಕಳೆದ ಆಗಸ್ಟ್ ನಲ್ಲಿ ಅವನಿಗೆ 15 ವರ್ಷಗಳ ಜೈಲು ವಾಸವನ್ನು ವಿಧಿಸಲಾಗಿದೆ. ಇದು ಕೇವಲ ಇಬ್ಬರ ಅನುಭವವಲ್ಲ. ಇಲ್ಲಿನ ಹೆಚ್ಚಿನ ಎಲ್ಲಾ ಖೈದಿಗಳದ್ದು ಇದೇ ಪರಿಸ್ಥಿತಿ.

ಅತ್ಯಂತ ಹೀನಾಯವಾದ ವಿಷಯವೇನೆಂದರೆ ಇಲ್ಲಿ ಮೃತದೇಹಗಳನ್ನು ಅವರ ಮನೆಯವರಿಗೊಪ್ಪಿಸದೆ ಅಲ್ಲಿಯೇ ಸಮಾಧಿ ಮಾಡಲಾಗುತ್ತದೆ.
ಇದರೊಂದಿಗೆ ಚೈನಾ ದ ಈ ಶಿಬಿರದ ಕುರಿತಾದಂತಹ ಸಾಕ್ಷ್ಯಾಧಾರಗಳನ್ನು ಜಗತ್ತಿಗೆ ಗೊತ್ತಾಗದಂತೆ ರಹಸ್ಯ ಕಾಪಾಡಲಾಗುತ್ತದೆ.
ಇಲ್ಲಿ ಬಂಧಿಸಲ್ಪಡುವಂತಹ ಮಕ್ಕಳನ್ನು ಅನಾಥಾಶ್ರಮ ಮತ್ತು ಬೋರ್ಡಿಂಗ್ ಶಾಲೆಗಳಿಗೆ ಕಳುಹಿಸಲಾಗುತ್ತಿದ್ದು ,ಅಲ್ಲಿ ತಮ್ಮ ಧರ್ಮವನ್ನು ಮತ್ತು ತಮ್ಮ ಗುರುತನ್ನು ದ್ವೇಷಿಸುವಂತೆ ಹಾಗೂ ಚೈನಾ ಭಾಷೆಯಲ್ಲಿ ಮಾತಾಡುವಂತೆ ಒತ್ತಡ ಹೇರಲಾಗುತ್ತದೆ. ಇದನ್ನು ವಿರೋಧಿಸಿದಲ್ಲಿ ಮಕ್ಕಳಿಗೂ ಚಿತ್ರಹಿಂಸೆ ನೀಡಲಾಗುತ್ತದೆ.ಹೆತ್ತವರಿಗೆ ತಮ್ಮ ಮಕ್ಕಳ ಬಗ್ಗೆ ಮಾಹಿತಿಯೂ ಇರುವುದಿಲ್ಲ.

ಪೂರ್ವ ತುರ್ಖಿಸ್ತಾನ್ ನ ಹೆಚ್ಚಿನ ಹಳ್ಳಿ- ಪಟ್ಟಣಗಳು ಜನರಿಲ್ಲದೆ ಖಾಲಿಯಾಗಿದೆ. ಸುಮಾರು ಶೇಕಡಾ ಎಪ್ಪತ್ತರಷ್ಟು ಈ ಭಾಗದ ಜನರು ಶಿಬಿರಗಳಲ್ಲಿ ಬಂಧಿಯಾಗಿದ್ದಾರೆ.

LEAVE A REPLY

Please enter your comment!
Please enter your name here