ಸಿರಿಯಾ: ಭೀಕರ ರಾಸಾಯನಿಕ ದಾಳಿಯಲ್ಲಿ ಮಕ್ಕಳು ಸೇರಿದಂತೆ 70 ಬಲಿ!

0
406

ನ್ಯೂಸ್ ಕನ್ನಡ ವರದಿ(09-04-2018): ಬಂಡುಕೋರರ ನಿಯಂತ್ರಣದಲ್ಲಿರುವ ಪೂರ್ವ ಗೌಟಾದ ಭಾಗವಾಗಿರುವ ಡೌಮ ನಗರದ ಮೇಲೆ ಅಧ್ಯಕ್ಷ ಬಷಾರುಲ್ ಅಸದ್ ನೇತೃತ್ವದ ಸರಕಾರಿ ಸೇನೆ ನಡೆಸಿದ ರಾಸಾಯನಿಕ ದಾಳಿಯಲ್ಲಿ ಮಕ್ಕಳು ಸೇರಿದಂತೆ ಸುಮಾರು 70 ಜನರು ಉಸಿರುಗಟ್ಟಿ ಸಾವೀಗೀಡಾಗಿದ್ದಾರೆ.

ಮಕ್ಕಳು ಬಲಿಯಾಗುತ್ತಿದ್ದರೂ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸದ ಸೇನೆಯು ಸತತವಾಗಿ ಡೌಮ ನಗರದ ಮೇಲೆ ಬಾಂಬ್ ಗಳ ಸುರಿಮಳೆಗೈಯುತ್ತಿದೆ. ಮೊನ್ನೆ ನಡೆದ ಬಾಂಬ್ ದಾಳಿಯಲ್ಲಿ 8 ಮಕ್ಕಳು ಸೇರಿದಂತೆ ಸುಮಾರು 40 ಜನರು ಬಲಿಯಾಗಿದ್ದು, ನಂತರ ನಡೆದ ರಾಸಾಯನಿಕ ದಾಳಿಯಲ್ಲಿ ಕನಿಷ್ಠ 70 ಜನರು ಬಲಿಯಾಗಿದ್ದು, ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆಂದು ತಿಳಿದು ಬಂದಿದೆ. ರಾಸಾಯನಿಕ ದಾಳಿಯಲ್ಲಿ ಹೆಚ್ಚಿನವರು ಉಸಿರುಗಟ್ಟಿ ಮರಣವನ್ನು ಹೊಂದಿದ್ದು, ನವಜಾತ ಶಿಶುಗಳು ಸೇರಿದಂತೆ ಮಕ್ಕಳು ಉಸಿರುಗಟ್ಟಿ ಅಳುತ್ತಿರುವ ದೃಶ್ಯ ಕರುಣಾಜನಕವಾಗಿತ್ತು.

ಆದರೆ ರಾಸಾಯನಿಕ ದಾಳಿಯನ್ನು ಅಲ್ಲಗೆಳೆದ ಸರಕಾರಿ ಸೇನೆಯು, ಬಂಡುಕೋರರ ಮೇಲೆ ರಾಸಾಯನಿಕ ದಾಳಿ ನಡೆಸುವ ಅನಿವಾರ್ಯತೆ ನಮಗಿಲ್ಲ ಎಂದು ಹೇಳಿದೆ. ಆದರೆ ಹೆಲಿಕಾಪ್ಟರ್ ನಲ್ಲಿ ರಾಸಾಯನಿಕ ಬಾಂಬ್ ಗಳನ್ನು ಕೆಳಕ್ಕೆ ಹಾಕಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.

LEAVE A REPLY

Please enter your comment!
Please enter your name here