ಕನ್ನಡ ಚಿತ್ರನಟಿಯೊಂದಿಗೆ ಮದುವೆ: ಕ್ರಿಕೆಟಿಗ ಯಜುವೇಂದ್ರ ಚಾಹಲ್ ಹೇಳಿದ್ದೇನು?

0
1157

ನ್ಯೂಸ್ ಕನ್ನಡ ವರದಿ-(24.04.18): ಭಾರತೀಯ ಕ್ರಿಕೆಟ್ ತಂಡ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಸ್ಪಿನ್ ಬೌಲರ್ ಆಗಿರುವ ಯಜುವೇಂದ್ರ ಚಾಹಲ್ ಕುರಿತಾದಂತೆ ಸುದ್ದಿಯೊಂದು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಕನ್ನಡದ ಫಸ್ಟ್ ರ್ಯಾಂಕ್ ರಾಜು, ಉಪ್ಪಿಟ್ಟು ಮುಂತಾದ ಚಿತ್ರಗಳಲ್ಲಿ ನಟಿಸಿರುವ ತನಿಷ್ಕಾ ಕಪೂರ್ ರನ್ನು ಯಜುವೇಂದ್ರ ಚಾಹಲ್ ವಿವಾಹವಾಗಲಿದ್ದಾರೆಂಬ ಸುದ್ದಿಯು ಮಾಧ್ಯಮದಲ್ಲೂ ಹರಿದಾಡಿತ್ತು. ಇದೀಗ ಈ ವಿಷಯದ ಕುರಿತಾದಂತೆ ಚಾಹಲ್ ಸಾಮಾಜಿಕ ತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಈ ಕುರಿತಾದಂತೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಯಜುವೇಂದ್ರ ಚಾಹಲ್, ” ಎಲ್ಲರ ಗಮನಕ್ಕೆ, ನಾನು ನನ್ನ ಕಡೆಯಿಂದ ಸ್ಪಷ್ಟನೆ ನೀಡಲು ಬಯಸುತ್ತಿದ್ದು, ನಾನು ಮತ್ತು ತನಿಷ್ಕಾ ಉತ್ತಮ ಸ್ನೇಹಿತರು ಮಾತ್ರ. ನನ್ನ ಜೀವನದಲ್ಲಿ ಸದ್ಯ ವಿಶೇಷವಾದುದು ಏನೂ ನಡೆಯುತ್ತಿಲ್ಲ. ನಾನು ಮದುವೆಯಾಗುತ್ತಿಲ್ಲ. ಎಲ್ಲಾ ಮಾಧ್ಯಮಗಳಿಗೂ ನನ್ನದೊಂದು ಬೇಡಿಕೆ, ದಯವಿಟ್ಟು ಆಧಾರರಹಿತ ಸುದ್ದಿಗಳನ್ನು ಹರಡಬೇಡಿ. ಇಂತಹಾ ಸುದ್ದಿಗಳನ್ನು ಹರಡುವ ಮುಂಚೆ ಪರಿಶೀಲನೆ ಮಾಡಿ ಎಂದು ಬರೆದುಕೊಂಡಿದ್ದಾರೆ.

LEAVE A REPLY

Please enter your comment!
Please enter your name here