86 ವರ್ಷದ ಹಳೆಯ ಸೇತುವೆಯನ್ನು ಕೇವಲ 5 ಸೆಕೆಂಡ್ ಗಳಲ್ಲಿ ಧ್ವಂಸ: ವೀಡಿಯೋ ವೀಕ್ಷಿಸಿ!

0
815

ನ್ಯೂಸ್ ಕನ್ನಡ ವರದಿ-(12.04.18): ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತಿನಂತೆ ಹಿಂದಿನ ಕಾಲದವರು ಕಷ್ಟಪಟ್ಟು ಕಟ್ಟಿದ್ದ ಹಳೆಯ ಸೇತುವೆಯೊಂದನ್ನು ಆಧುನಿಕ ಸ್ಫೋಟಕಗಳನ್ನು ಬಳಸಿ ಕೇವಲ ಐದು ಸೆಕೆಂಡ್ ಗಳಲ್ಲೇ ಧ್ವಂಸ ಮಾಡಲಾಗಿದೆ. ಅಮೇರಿಕಾದ ವಾಷಿಂಗ್ಟನ್ ನ ಸಮೀಪವಿರುವ ಬಾರ್ಕಲೆ ಸೇತುವೆಯನ್ನು 1932ರಲ್ಲಿ ನಿರ್ಮಿಸಲಾಗಿದ್ದು, ಅದನ್ನು ಟೋಲ್ ಸೇತುವೆಯ ರೀತಿಯಲ್ಲಿ ಉಪಯೋಗಿಸಲಾಗುತ್ತಿತ್ತು. ಬುಧವಾರದಂದು ಆ ಸೇತುವೆಯನ್ನು ಸ್ಫೋಟಕ ಬಳಸಿ ಧ್ವಂಸ ಮಾಡಲಾಗಿದೆ.

ಈ ಸೇತುವೆಯು ಹಳೆಯದಾದ ಕಾರಣ, ಅದರ ಪಕ್ಕದಲ್ಲೇ ಇನ್ನೊಂದು ಸೇತುವೆಯನ್ನು ನಿರ್ಮಿಸಲಾಗಿದೆ. ಈ ಹೊಸ ಸೇತುವೆಯು ಸಂಚಾರಕ್ಕೆ ಮುಕ್ತವಾಗಿದ್ದು, ಈಗ ಹಳೆಯ ಸೇತುವೆಯನ್ನು ಕೆಡವಲಾಗಿದೆ. ಕೆಡವುದಕ್ಕೂ ಮುಂಚೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಸುತ್ತಮುತ್ತಲಿನ ಜನರನ್ನು ಸುಮಾರು 1500 ಅಡಿ ದೂರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಸ್ಫೋಟದ ಬಳಿಕ ಕೊಳೆಯಾಗಿದ್ದ ನದಿಯನ್ನು ಸ್ವಚ್ಛಗೊಳಿಸಲಾಯಿತು ಎಂದು ತಿಳಿದು ಬಂದಿದೆ.

SLO-Mo of the Old Lake Barkley Bridge Demolition. Blast is about 5 minutes in.

Posted by KYTCDistrict1 on Wednesday, 11 April 2018

LEAVE A REPLY

Please enter your comment!
Please enter your name here