ಬೆಂಗಳೂರಿನ RMV 2ನೇ ಹಂತದ 2ನೇ ಬೂತಿನಲ್ಲಿ ಯಾವ ಬಟನ್ ಒತ್ತಿದರೂ ಕಮಲಕ್ಕೆ ಮತ!: ಬ್ರಿಜೇಶ್‌ ಕಾಳಪ್ಪ

0
16611

ನ್ಯೂಸ್ ಕನ್ನಡ ವರದಿ: ನ್ಯೂಸ್ ಕನ್ನಡ ವರದಿ: ದೇಶದ್ಯಾಂತ ಕುತೂಹಲ ಕೆರಳಿಸಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಮತದಾನ ಇಂದು ರಾಜ್ಯಾದ್ಯಂತ ನಡೆಯುತ್ತಿದೆ. ಆದರೆ ಯಾವ ಬಟನ್ ಒತ್ತಿದರೂ ಕಮಲದ ಹೂವಿಗೆ ಮತ ಎಂಬ ಗಂಭೀರ ಆರೋಪವನ್ನು ಸುಪ್ರೀಂಕೋರ್ಟ್ ವಕೀಲ, ಕಾಂಗ್ರೆಸ್ ಮಾಧ್ಯಮ ವಕ್ತಾರ ಬ್ರಿಜೇಶ್‌ ಕಾಳಪ್ಪ ಮಾಡಿದ್ದಾರೆ.

ಬೆಂಗಳೂರಿನ ಆರ್‌ಎಂವಿ 2ನೇ ಹಂತದ 2ನೇ ಮತಗಟ್ಟೆಯಲ್ಲಿ ಈ ದೋಷ ಕಂಡು ಬಂದಿದೆ, ಯಾವ ಬಟನ್ ಒತ್ತಿದರೂ ಕಮಲದ ಹೂವಿಗೆ ಮತ ಬೀಳುತ್ತಿದೆ, ಹಾಗಾಗಿ ಜನರು ಅಸಮಾಧಾನಗೊಂಡು ಮತ ಚಲಾಯಿಸದೇ ಹಿಂದಕ್ಕೆ ತೆರಳುತ್ತಿದ್ದಾರೆ ಎಂದು ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಇವಿಎಂಗಳಲ್ಲಿ ದೋಷ ಇದ್ದ ಕಾರಣ ಅಲ್ಲಿ ಮತದಾನ ಸ್ಥಗಿತವಾಗಿದ್ದು, ಇನ್ನೂ ಮತದಾನ ಪ್ರಕ್ರಿಯೆ ಪುನರಾರಂಭ ಆಗಿಲ್ಲ, ನನ್ನ ಮತವೂ ಇದೇ ಬೂತ್ ನಲ್ಲಿ ಇದೆ ಎಂದು ಅವರು ಮತ್ತೊಂದು ಟ್ವೀಟ್ ಮಾಡಿ ತಿಳಿಸಿದರು. ಮತ್ತು ರಾಮನಗರ, ಚಾಮರಾಜಪೇಟೆ, ಹೆಬ್ಬಾಳ ಸೇರಿದಂತೆ ರಾಜ್ಯಾದ್ಯಂತ ಮೂರು ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ, ಕಾಂಗ್ರೆಸ್ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಿ ಮಾತುಕತೆ ನಡೆಸಲಿದೆ ಎಂದು ಅವರು ಸರಣಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here