ಲೋಕಸಭೆ ಚುನಾವಣಾ ತಯಾರಿ; ‘ಕಮಲಜ್ಯೋತಿ’ ಅಭಿಯಾನಕ್ಕೆ ರಾಜ್ಯ ಬಿಜೆಪಿಯಿಂದ ಚಾಲನೆ!

0
247

ನ್ಯೂಸ್ ಕನ್ನಡ ವರದಿ (27-2-2019): ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದತೆ ಆರಂಭಿಸಿರುವ ಬಿಜೆಪಿ ನಿನ್ನೆ ರಾಜ್ಯದಲ್ಲಿ ‘ಕಮಲಜ್ಯೋತಿ’ ಅಭಿಯಾನಕ್ಕೆ ಚಾಲನೆ ನೀಡಿತು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್​ವೈ ನಿವಾಸ ಮುಂಭಾಗದಲ್ಲಿ ರಂಗೋಲಿಯಿಂದ ಬಿಡಿಸಿದ ಕಮಲ ಚಿತ್ರದಲ್ಲಿ ದೀಪ ಬೆಳಗಿಸುವ ಮೂಲಕ ಕಮಲಜ್ಯೋತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.ಬಳಿಕ ಯಡಿಯೂರಪ್ಪ ಅವರು ಮನೆ ಮನೆಗೆ ತೆರಳಿ ದೀಪ ಹಚ್ಚಿದರು. ಈ ವೇಳೆ ಬಿಎಸ್​ವೈ ಅವರನ್ನು ಮಹಿಳೆಯರು ಮತ್ತು ಮಕ್ಕಳು ಆರತಿ ಎತ್ತಿ‌ ಸ್ವಾಗತಿಸಿದರು. ಮಕ್ಕಳು ಕಮಲ ನೀಡಿ ಸ್ವಾಗತಿಸಿದರು.

ಈ ಸಂದರ್ಭ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು ಇಡೀ ದೇಶಾದ್ಯಂತ ಕಮಲ ಜ್ಯೋತಿ ಅಭಿಯಾನ ನಡೆಯುತ್ತಿದೆ. ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವ ಸಂಕಲ್ಪ ಇದು. ಇಂದು (ನಿನ್ನೆ) ಭಾರತಕ್ಕೆ ಹೆಮ್ಮೆಯ ದಿನ.ನರೇಂದ್ರ ಮೋದಿಯವರು ನೆರೆಯ ಪಾಕಿಸ್ತಾನದ ಕುತಂತ್ರಿ ಬುದ್ದಿಯನ್ನು ವಿಶ್ವದ ಎದುರು ಬಟ್ಟಬಯಲು ಮಾಡಿದ್ದಾರೆ‌. ಪಾಕಿಸ್ತಾನ ವಿಶ್ವ ಸಮುದಾಯದ ಎದುರು ಏಕಾಂಗಿಯಾಗುವಂತೆ ಮಾಡಿದ್ದಾರೆ. ಅಂತಹ ನರೇಂದ್ರ ಮೋದಿಯವರಿಗೆ ನಾವು ಅಭಿನಂದಿಸಲೇಬೇಕು ಎಂದು ಹೇಳಿದರು. ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ನೂರಾರು ಉಗ್ರರರನ್ನು ಕೊಂದ ಯೋಧರಿಗೆ ಕೋಟಿ ನಮಸ್ಕಾರ ಎಂದೂ ಹೇಳಿದರು. ಇತರ ನಾಯಕರುಗಳು ಕೂಡಾ ಇದರಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here