ರಮಾನಾಥ ರೈಗೆ ಚುನಾವಣಾ ಸಮಯದಲ್ಲಿ ಮಾತ್ರ ಮುಸಲ್ಮಾನರ ಮೇಲೆ ಪ್ರೀತಿ ಮೂಡುತ್ತದೆ: ಹರಿಕೃಷ್ಣ ಬಂಟ್ವಾಳ್!

0
509

ನ್ಯೂಸ್ ಕನ್ನಡ ವರದಿ(22-04-2018): ಚುನಾವಣಾ ಸಮಯದಲ್ಲಿ ಮುಸಲ್ಮಾನರ ಮೇಲೆ ರಮಾನಾಥ ರೈಯವರಿಗೆ ಪ್ರೀತಿ ಉಕ್ಕಿಹರಿಯುತ್ತದೆ.ಇದು ಕೇವಲ ನಾಟಕವಾಗಿದೆ. ಮುಸಲ್ಮಾನರಿಗೆ ರಮಾನಾಥ ರೈ ಮಾಡಿದ ಉಪಕಾರವೇನು ಎಂದು ಬಿಜೆಪಿ ಜಿಲ್ಲಾ ವಕ್ತಾರ ಹರಿಕೃಷ್ಣ ಬಂಟ್ವಾಳ್ ಟೀಕಿಸಿದ್ದಾರೆ.

ರಮಾನಾಥ ರೈ ಯಾವುದೇ ಮುಸಲ್ಮಾನರನ್ನು ಡಾಕ್ಟರ್ ಇಂಜಿನಿಯರ್ ಅಥವಾ ಲಾಯರ್ ಮಾಡಿದ ಉದಾಹರಣೆಗಳಿದೆಯೇ ಅಥವಾ ಯಾವುದಾದರೂ ಉನ್ನತ ಹುದ್ದೆಯನ್ನು ಕೊಡಿಸಿದ್ದಾರೆಯೇ ಎಂದು ಪ್ರಶ್ನಿಸಿದ ಹರಿಕೃಷ್ಣ, ಅಶ್ರಫ್ ಕಲಾಯಿ ಜಲೀಲ್ ಕರೋಪಾಡಿಯಂತಹ ಯುವಕರನ್ನು ಕೊಂದ ಹಂತಕರನ್ನು ರಕ್ಷಿಸಿದ ಕೀರ್ತಿ ರೈಗೆ ಸಲ್ಲುತ್ತದೆ ಎಂದು ಆರೋಪಿಸಿದರು.

ರಮಾನಾಥ ರೈ,ಜನಾರ್ಧನ ಪೂಜಾರಿಯನ್ನು ಭೇಟಿ ಮಾಡಿದ ಕುರಿತು ಮಾತನಾಡಿದ ಹರಿಕೃಷ್ಣ ಬಂಟ್ವಾಳ್, ಒಂದು ಸಲವಲ್ಲ ನೂರು ಸಲ ಪೂಜಾರಿಯನ್ನು ಭೇಟಿಯಾದರೂ ಬಿಲ್ಲವರ ಮತ ಪಡೆಯಲು ರೈಯವರಿಗೆ ಸಾಧ್ಯವಿಲ್ಲ. ಜನಾರ್ಧನ ಪೂಜಾರಿಯವರ ಬಳಿ ಯಾರು ಹೋದರೂ ಆಶಿರ್ವಾದ ಮಡುವ ಗುಣ ಅವರಿಗಿದೆ ಎಂದರು.

LEAVE A REPLY

Please enter your comment!
Please enter your name here