ನ್ಯೂಸ್ ಕನ್ನಡ ವರದಿ (27-2-2019)ವಾಷಿಂಗ್ಟನ್:ಫೆಬ್ರವರಿ 14 ರ ಪುಲ್ವಾಮದಲ್ಲಿನ ಉಗ್ರರ ದಾಳಿಗೆ ಜಗತ್ತಿನಲ್ಲಿ ಭಾರತದ ಪರವಾಗಿ ಅಲೆಗಳು ಎದ್ದು, ಭಯೋತ್ಪಾದನೆಯ ಮಟ್ಟ ಹಾಕಲು ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಶುರುವಾಗಿರುವ ನಡುವೆಯೇ ಭಾರತವು ಪಾಕ್ ಮೇಲೆ ದಾಳಿ ನಡೆಸಲು ಉತ್ಸುಕವಾಗಿದೆ. ಅದರಂತೆ ಫೆಬ್ರವರಿ 26ರಂದು ಭಾರತವು ವಾಯು ಸೇನೆ ಮೂಲಕ ಪಾಕಿಸ್ತಾನದ ಕೆಲವು ಉಗ್ರರ ಅಡಗು ತಾಣವನ್ನು ನಾಶಪಡಿಸಿತು ಎಂಬ ವರದಿಯ ನಡುವೆಯೇ ಪಾಕಿಸ್ತಾನಕ್ಕೆ ಅಮೆರಿಕವು ಭಾರತದ ಮೇಲೆ ಮಿಲಿಟರಿ ಕಾರ್ಯಾಚರಣೆ ನಡೆಸಿದ್ರೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದೆ.
ಬಾಲಾಕೋಟ್ ನಲ್ಲಿ ಉಗ್ರರ ಕ್ಯಾಂಪ್ ಗಳ ಮೇಲೆ ದಾಳಿ ಮಾಡಿದ ಭಾರತದ ವಾಯುಪಡೆ ಪಾಕಿಸ್ತಾನದ ಸೇನೆ ಹಾಗೂ ಸಾರ್ವಜನಿಕರ ಮೇಲೆ ಯಾವುದೇ ದಾಳಿಗಳಾಗಿಲ್ಲ. ಹೀಗಾಗಿ ಭಾರತ ವಿರುದ್ಧ ಮಿಲಿಟರಿ ಕಾರ್ಯಾಚರಣೆ ನಡೆಸಿದರೆ ನಿಮ್ಮ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಮೆರಿಕಾದ ಕಾರ್ಯದರ್ಶಿ ಮೈಕ್ ಪೊಂಪೆಯೊ ಎಚ್ಚರಿಸಿದೆ.ಭಯೋತ್ಪಾದನೆ ವಿರುದ್ಧ ಈಗಲಾದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಿ ಅದು ನಿಮಗೆ ಒಳ್ಳೆಯದ್ದು. ಇಲ್ಲದಿದ್ದರೆ ಭವಿಷ್ಯದಲ್ಲಿ ಹೆಚ್ಚಿನ ಪರಿಣಾಮ ಹೆದರಿಸಬೇಕಾಗುತ್ತದೆ ಎಂದು ಹೇಳಿದೆ.