ಮಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ: ಇಬ್ಬರ ಬಂಧನ

0
84

ಮಂಗಳೂರು : ಸಾಮಾಜಿಕ ಜಾಲತಾಣದ ಮೂಲಕ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಮಂಗಳೂರು ಪೊಲೀಸರು ಭೇದಿಸಿದ್ದಾರೆ. ಆನ್ಲೈನ್ ವೆಬ್ ಸೈಟ್ ಮುಖಾಂತರ ಹೈಫೈ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಮಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ನಂತೂರು ಜಂಕ್ಷನ್ ಬಳಿ ಇರುವ ಸ್ಟಾರ್ ಲಿಜೆಸಿ ಅಪಾರ್ಟ್ ಮೆಂಟ್ ನ ಜಿ-1‌ ಫ್ಲಾಟ್ ನಲ್ಲಿ ಹೊರ ರಾಜ್ಯದ ಮಹಿಳೆಯರನ್ನು ಇಟ್ಟುಕೊಂಡು , ಲೊಕ್ಯಾಂಟೋ ವೆಬ್ ಸೈಟ್ ಮುಖಾಂತರ ಮಹಿಳೆಯರ ಫೋಟೋವನ್ನು ಅಪ್ಲೋಡ್ ಮಾಡಿ ಗಿರಾಕಿಗಳನ್ನು ಆಹ್ವಾನಿಸಿ ಹೈ ಫೈ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಮಂಗಳೂರಿನ ಎಕನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಕಮಿಷನರಿಗೆ ಖಚಿತ ಮಾಹಿತಿ ದೊರೆತಿತ್ತು. ಈ ಸಂಬಂಧ ಪೋಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದು , ಮನೆಯಲ್ಲಿದ್ದ ಉತ್ತರ ಪ್ರದೇಶ ಮತ್ತು ಒಡಿಶಾ ಮೂಲದ 3 ಯುವತಿಯರನ್ನು ರಕ್ಷಿಸಿದ್ದಾರೆ.

ಬಂಧಿತರನ್ನು ಬಂಟ್ವಾಳದ ಐವನ್ ಸಿರಿಲ್ ಪಿಂಟೊ ಮತ್ತು ಯೆಯ್ಯಾಡಿಯ ನಿವಾಸಿ ಸತೀಶ್ ಆಚಾರ್ಯ ಎಂದು ಗುರುತಿಸಲಾಗಿದೆ. ಬಂಧಿತ ಅರೋಪಿಗಳಿಂದ 23 ಸಾವಿರ ರೂಪಾಯಿ ನಗದು ಸೇರಿದಂತೆ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here