ಮುಝಾಫರ್ ನಗರ: – ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಆಯೋಜಿಸಿದ್ದ ಬಿರಿಯಾನಿ ಭೋಜನ ಕೂಟದಲ್ಲಿ ಮಾರಾಮಾರಿ ಉಂಟಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದು , ಪೊಲೀಸರು 9 ಮಂದಿಯನ್ನು ಬಂಧಿಸಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆ ದಿನಾಂಕ ನಿಗದಿ ಬಳಿಕ ಬಿಎಸ್​ಪಿ ಬಿಟ್ಟು ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದ ಸ್ಥಳೀಯ ಮಾಜಿ ಶಾಸಕ ಮೌಲಾನಾ ಜಮೀಲ್,​ ಬಿಜ್ನೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಸಿಮುದ್ದೀನ್ ಸಿದ್ದಿಕಿ ಪರ ಪ್ರಚಾರ ಸಭೆ ಆಯೋಜನೆ ಮಾಡಿದ್ದರು.

ಸಭೆ ಮುಗಿದ ಬಳಿಕ ನೆರೆದಿದ್ದ ಕಾರ್ಯಕರ್ತರಿಗೆಲ್ಲರಿಗೂ ಬಿರಿಯಾನಿ ಊಟವನ್ನ ಏರ್ಪಡಿಸಲಾಗಿತ್ತು. ಭೋಜನದ ಸಮಯದಲ್ಲಿ ಬಿರಿಯಾನಿ ಹಂಚುವ ವೇಳೆ ಕೆಲವು ಕಾರ್ಯಕರ್ತರು ತಮಗೆ ಮೊದಲು ಕೊಡುವಂತೆ ತಗಾದೆ ತೆಗೆದು ನೂಕು ನುಗ್ಗಲು ಉಂಟಾಗಿದೆ. ಇನ್ನೊಂದು ತಂಡದಲ್ಲಿನ ಕಾರ್ಯಕರ್ತರು ಇದರಿಂದ ಉದ್ರಿಕ್ತರಾಗಿದ್ದು , ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ನೂಕುನುಗ್ಗಲು ಉಂಟಾಗಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ

ಇದೀಗ ಈ ಭೋಜನ ಕೂಟಕ್ಕೆ ಚುನಾವಣಾ ಅಧಿಕಾರಗಳಿಂದ ಅನುಮತಿಯನ್ನು ಪಡೆದಿರಲಿಲ್ಲ ಎಂದಿರುವ ಪೊಲೀಸರು , ಮೌಲಾನಾ ಜಮೀಲ್ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜಮೀಲ್, ಆತನ ಪುತ್ರ ನಯೀಮ್ ಹಮೀದ್ ಸೇರಿದಂತೆ 34 ಮಂದಿ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ದೂರು ದಾಖಲಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ರಾಮ್‍ಮೋಹನ್ ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

LEAVE A REPLY

Please enter your comment!
Please enter your name here