ಅಹಮದಾಬಾದ್ : ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಯುವ ನಾಯಕ ಹಾರ್ದಿಕ್ ಪಟೇಲ್‌ಗೆ ಕಪಾಳಮೋಕ್ಷ ಮಾಡಿರುವ ಘಟನೆ ಗುಜರಾತಿನ ಸುರೇಂದ್ರನಗರದಲ್ಲಿ ನಡೆದಿದೆ

ಚುನಾವಣಾ ಪ್ರಚಾರದ ವೇಳೆ ವೇದಿಕೆಗೆ ಹತ್ತಿದ ಕಾರ್ಯಕರ್ತನೊಬ್ಬ  ಭಾಷಣ ಮಾಡುತ್ತಿದ್ದ ಹಾರ್ದಿಕ್ ಪಟೇಲ್‌ ಅವರ ಕೆನ್ನೆಗೆ ಭಾರಿಸಿದ್ದು , ಇದರ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

25 ವರ್ಷದ ಹಾರ್ದಿಕ್ ಪಟೇಲ್, 2015 ರಿಂದ ಪಾಟೀದಾರ್ ಸಮುದಾಯದ ಮೀಸಲಾತಿಗೆ ಹೋರಾಟ ನಡೆಸುತ್ತಿದ್ದಾರೆ. ಕಳೆದ ತಿಂಗಳಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು.

LEAVE A REPLY

Please enter your comment!
Please enter your name here