ಮೋದಿ ಮೋದಿ ಘೋಷಣೆಯೊಂದಿಗೆ ಶುರುವಾಗಿದೆ ದರೋಡೆಕೋರರ ಹೊಸ ಟ್ರಿಕ್. ಲೂಟಿದ್ದು ಬಡವನ ಮನೆಯ ಲಕ್ಷ ರೂ. ಬೆಲೆಬಾಳುವ ಸಾಮಾಗ್ರಿ. ಏನಿದು ಪ್ರಕರಣ ??

0
1594

ಬಿಹಾರದಲ್ಲೊಂದು ಅಸಾಮಾನ್ಯ ಪ್ರಕರಣ ನಡೆದಿದೆ. ‘ಮೋದಿ ಮೋದಿ’ ಎಂಬ ಘೋಷಣೆಯೊಂದಿಗೆ ಮನೆಯೊಳಕ್ಕೆ ನುಗ್ಗಿದ ಢಕಾಯಿತರ ಗುಂಪೊಂದು ಲಕ್ಷ ರೂಪಾಯಿ ಬೆಲೆ ಬಾಳುವ ಸಾಮಗ್ರಿ, ನಗದುಗಳನ್ನು ದೋಚಿದ ಆಘಾತಕಾರಿ ಘಟನೆ ಬಿಹಾರ್ ಜಿಲ್ಲೆಯ ಸಿವಾನ್ ನ ಘುರ್ಘಾಟ್ ನಲ್ಲಿ ನಡೆದಿದೆ.

ಘುರ್ಘಾಟ್ ನಲ್ಲಿ ನೆಲೆಸಿರುವ ಉಪೇಂದ್ರ ರಾಜ್ ಎನ್ನುವವರ ಮನೆಯಲ್ಲಿ ಈ ಸಂಭವ ನಡೆದಿದೆ. ಅವರು ಘಟನೆಯ ಬಗ್ಗೆ ವಿವರಿಸುತ್ತಾ, ರಾತ್ರಿ ಹೊತ್ತು “ಮೋದಿ ಮೋದಿ” ಎನ್ನುವ ಘೋಷಣೆಯನ್ನು ಕೇಳಿ,ವೋಟ್ ಗಾಗಿ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಬಂದಿರಬಹುದೆಂದು ಭಾವಿಸಿ ಬಾಗಿಲು ತೆರೆದಿದ್ದೇವೆ. ಕ್ಷಣ ಮಾತ್ರದಲ್ಲಿ ಒಳನುಗ್ಗಿದ ಢಕಾಯಿತರು ಮನೆಯಲ್ಲಿದ್ದ ,ಹೆಂಗಸರು- ಗಂಡಸರೆನ್ನದೆ ಎಲ್ಲರ ಮೇಲೂ ಆಕ್ರಮಣ ಮಾಡಿ ಮನೆಯಲ್ಲಿದ್ದಂತಹ ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಹಾಗೂ ನಗದನ್ನು ದೋಚಿದ್ದಾರೆ”ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ಕುರಿತು ಮಾತನಾಡುತ್ತಾ, ಸಿವಾನ್ ನ ಪೋಲೀಸ್ ಆಫೀಸರ್- ರಾಂ ಬಾಲಕ್ ಯಾದವ್, “ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ “ಎಂದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಯಾವೊಬ್ಬ ಅಪರಾಧಿಯನ್ನೂ ಬಂಧಿಸಿಲ್ಲ.

LEAVE A REPLY

Please enter your comment!
Please enter your name here