ಚುನಾವಣೆಗಳ ರಾಜನಿಂದ ರಾಹುಲ್ ವಿರುದ್ಧ ಸ್ಪರ್ಧೆ

0
175

 

 

ಬರೋಬ್ಬರಿ 201 ಚುನಾವಣೆಗಳಲ್ಲಿ ಸ್ಪರ್ಧಿಸಿರುವ “ಚುನಾವಣೆಗಳ ರಾಜ” ಎಂದೇ ಹೆಸರಾಗಿರುವ ಕೆ.ಪದ್ಮ ರಾಜನ್ ಎಲ್ಲರಿಗೂ ಗೊತ್ತಿದ್ದಾರೆ. ಈ ಬಾರಿ ಇವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ವಯನಾಡ್‌ ನಿಂದ ಸ್ಪರ್ಧಿಸಲು ಸಿದ್ಧತೆ ನಡೆಸಿಕೊಂಡಿದ್ದಾರೆ.

ಒಂದೇ ಒಂದು ಚುನಾವಣೆಯಲ್ಲಿಯೂ ಗೆಲುವು ಸಾಧಿಸದಿದ್ದರೂ ಚುನಾವಣೆಗೆ ನಿಲ್ಲುವುದನ್ನು ಮಾತ್ರ ಬಿಡದ ಪದ್ಮರಾಜನ್‌ ಅವರು , ಈ ಬಾರಿ ರಾಹುಲ್ ವಿರುದ್ಧ ಸ್ಪರ್ಧೆಗೆ ತಯಾರಾಗಿದ್ದಾರೆ. ಸೋಮವಾರ ತಮಿಳುನಾಡು ಮೂಲದ ಪದ್ಮರಾಜನ್‌ ಅವರು ವಯನಾಡಿನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಅವರು ಒಟ್ಟು 201 ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ ದಾಖಲೆಯನ್ನು ಬರೆಯುವುದರೊಂದಿಗೆ, ಅತಿ ಹೆಚ್ಚು ಬಾರಿ ಸೋತಿರುವ ದಾಖಲೆಯನ್ನು ಹೊಂದಿದ್ದಾರೆ.

ಪ್ರತೀ ಬಾರಿಯೂ ಸೋಲುವುದು ಖಚಿತವಾದರೂ ಚುನಾವಣೆಗೆ ಏಕೆ ಸ್ಪರ್ಧಿಸುತ್ತೀರಾ ಎಂಬ ಪ್ರಶ್ನೆಗೆ ನಗುನಗುತ್ತಲೇ ಉತ್ತರಿಸುವ ಅವರು , ನಾನು ಚುನಾವಣೆಗೆ ಗೆಲ್ಲುವುದಕ್ಕೆ ನಿಲ್ಲುವುದಿಲ್ಲ. ಬದಲಿಗೆ, ಚುನಾವಣೆಯಲ್ಲಿ ಸಾಮಾನ್ಯ ಪ್ರಜೆಯೂ ಸ್ಪರ್ಧಿಸಬಹುದು ಎನ್ನುವುದನ್ನು ತೋರಿಸಲು ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದಾರೆ. 

LEAVE A REPLY

Please enter your comment!
Please enter your name here