`ಮೇಲ್ತೆನೆ’ಯಿಂದ ಅಗಲಿದ ಬ್ಯಾರಿ ಮುಖಂಡರಿಗೆ ಸಂತಾಪ ಸೂಚಕ ಸಭೆ

0
389

ಮಂಗಳೂರು : ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗ `ಮೇಲ್ತೆನೆ’ಯ ವತಿಯಿಂದ ಅಗಲಿದ ಇಬ್ಬರು ಬ್ಯಾರಿ ಮುಖಂಡರಿಗೆ ಸಂತಾಪ ಸೂಚಕ ಸಭೆಯು ಇತ್ತೀಚೆಗೆ ಉಳ್ಳಾಲ ಮದನಿ ಜೂನಿಯರ್ ಕಾಲೇಜಿನಲ್ಲಿ ಜರುಗಿತು.

ಹಿರಿಯ ಬ್ಯಾರಿ ಸಾಹಿತಿ ಅಬ್ದುಲ್‍ ಖಾದರ್ ಹಾಜಿ ಗೋಳ್ತಮಜಲು ಅವರ ಬಗ್ಗೆ ಮೇಲ್ತೆನೆಯ ಅಧ್ಯಕ್ಷ ಹಂಝ ಮಲಾರ್ ಮತ್ತು ಉಳ್ಳಾಲದ ಎ.ಎ. ಕಾದರ್ ಅವರ ಬಗ್ಗೆ ಬಳಗದ ಸದಸ್ಯ ಇಸ್ಮತ್ ಪಜೀರ್ ಸ್ಮರಿಸಿ ಮಾತನಾಡಿದರು. ಅವರ ಸಾಹಿತ್ಯದ ಕೃಷಿಯ ಬಗ್ಗೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಸ್ಮರಿಸಲಾಯಿತು.

ಉಳ್ಳಾಲ ನಗರಸಭೆಯ ಕೌನ್ಸಿಲರ್ಗಳಾದ ಯು.ಎ.ಇಸ್ಮಾಯೀಲ್, ಅಸ್ಗರ್ ಅಲಿ, ಮಾಜಿ ಕೌನ್ಸಿಲರ್ ಫಾರೂಕ್ ಉಳ್ಳಾಲ್, ಮದನಿ ಎಜುಕೇಶನ್ ಎಸೋಸಿಯೇಶನ್‍ನ ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಖಾಸಿಂ,   ಕೋಶಾಧಿಕಾರಿ ಹಾಜಿ ಯು.ಪಿ.ಅರಬಿ, ಸಂಚಾಲಕ ಯು.ಎನ್. ಇಬ್ರಾಹೀಂ, ಸದಸ್ಯರಾದ ಹಸನಬ್ಬ ಮಾರ್ಗತಲೆ, ಸೈಯದ್‍ ತಾಹಿರ್ ತಂಙಳ್, ರಿಯಾಜ್ ಮಂಗಳೂರು, ಇಬ್ರಾಹೀಂ ಆಲಿಯಬ್ಬ, ಮದನಿ ಶಿಕ್ಷಣ ಸಂಸ್ಥೆಯ ಬೋಧಕೇತರ ಶಂಕರ್ ಪಾಟಾಳಿ, ಮೇಲ್ತೆನೆಯ ಸದಸ್ಯರಾದ ಮುಹಮ್ಮದ್ ಆಶೀರುದ್ದೀನ್ ಮಂಜನಾಡಿ, ಮುಹಮ್ಮದ್ ಬಾಷಾ ನಾಟೆಕಲ್ ಮುಂತಾದವರು ಉಪಸ್ಥಿತರಿದ್ದರು.

ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞ ಪಾರೆ ಅಧ್ಯಕ್ಷತೆ ವಹಿಸಿದ್ದರು.
ಮೇಲ್ತೆನೆಯ ಕೋಶಾಧಿಕಾರಿ ಹಾಗೂ ಮದನಿ ಕಾಲೇಜಿನ ಪ್ರಾಂಶುಪಾಲ ಇಸ್ಮಾಯೀಲ್ ಟಿ. ಸ್ವಾಗತಿಸಿದರು. ಸದಸ್ಯ ಬಶೀರ್ ಅಹ್ಮದ್‍ ಕಿನ್ಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಧಾನ ಕಾರ್ಯದರ್ಶಿ ಮನ್ಸೂರ್ ಅಹ್ಮದ್ ಸಾಮಣಿಗೆ ಕಾರ್ಯಕ್ರಮ ನಿರೂಪಿಸಿದರು ಮತ್ತು ಕಾರ್ಯದರ್ಶಿ ಬಶೀರ್ ಕಲ್ಕಟ್ಟ ವಂದಿಸಿದರು.

LEAVE A REPLY

Please enter your comment!
Please enter your name here