ಭಾರತೀಯರಿಗಿಂತ ಪಾಕಿಸ್ತಾನದ ಮಾನಸಿಕ ಆರೋಗ್ಯ ಮಟ್ಟ ಉತ್ತಮವಾಗಿದೆ. ಮಾನಸಿಕ ಖಿನ್ನತೆಯ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ.!!!

0
359

ಮಾನಸಿಕ ಖಿನ್ನತೆ ಮತ್ತು ನಡವಳಿಕೆಯ ಅಸ್ವಸ್ಥತೆಗಳ ಆರೋಗ್ಯ ಮಟ್ಟದಲ್ಲಿ ಯಾವುದೇ ಸುಧಾರಣೆ ಕಾಣದ ದೇಶಗಳ ಪಟ್ಟಿ ಇಲ್ಲಿದೆ, WHO ಪ್ರಕಾರ ಒಂದು ದೇಶ ಜನಸಂಖ್ಯೆಯ ಗಾತ್ರಕ್ಕೆ ಹೊಂದಿಕೊಳ್ಳುವ ಅಂಗವೈಕಲ್ಯ ಅಥವಾ ಮರಣದ ಕಾರಣದಿಂದಾಗಿ ಹೆಚ್ಚು ಮರಣ ಅನುಪಾತ ಹೊಂದುತ್ತದೆ

ಬ್ರಿಟಿಷ್ ಲೇಖಕ ಸಿ.ಎಸ್ ಲೆವಿಸ್ ಹೇಳುವ ಪ್ರಕಾರ , “ದೈಹಿಕ ನೋವಿಗೆ ಹೋಲಿಸಿದರೆ ಮಾನಸಿಕ ನೋವಿನ ಗಂಭೀರತೆ ಮೇಲ್ನೋಟಕ್ಕೆ ಅಷ್ಟಾಗಿ ಕಾಣುವುದಿಲ್ಲ. ಆದರೆ ಖಿನ್ನತೆಯು ಸಾಮಾನ್ಯವಾಗಿ ಕಂಡುಬರುತ್ತದೆ ಮತ್ತು ಅದನ್ನು ಸಹಿಸಿಕೊಳ್ಳಲು ಕಷ್ಟಕರ” ಎನ್ನುವುದಾಗಿದೆ.

ನಾವು ಇತರ ಖಾಯಿಲೆಗಳ ಬಗ್ಗೆ ಮಾತನಾಡುವಷ್ಟು ಅದರ ಬಗ್ಗೆ ಮಾತನಾಡುವುದಿಲ್ಲ, ಆದರೆ ವಿಶ್ವದಾದ್ಯಂತ 300 ದಶಲಕ್ಷ ಜನರು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದರೆ ನೀವು ನಂಬಲೇಬೇಕು.
ವಯಸ್ಸಾನುಸಾರ ಬರುವಂತಹ ಅಪಾಯಕಾರಿಯಾದ ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥತೆಯನ್ನು ನಿರ್ಲಕ್ಷಿಸಲಾಗುತ್ತದೆ. ಆದರೆ, ನಿಮಗೆ ಗೊತ್ತೇ, ? ಅತಿಯಾದ ಖಿನ್ನತೆಯು ಕೂಡ ಸಾವಿಗೆ ಕಾರಣವಾಗುತ್ತದೆ!!!

ವಿವಿಧ ದೇಶಗಳನ್ನು ಅವಲೋಕಿಸಿದಾಗ , ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಚೀನಾ ಮತ್ತು ಅಮೆರಿಕಾಕ್ಕಿಂತಲೂ ಭಾರತವು ವಿಶ್ವದಲ್ಲೇ ಹೆಚ್ಚು ಖಿನ್ನತೆ ಹೊಂದಿರುವ ದೇಶವಾಗಿದೆ. ಭಾರತ, ಚೀನಾ ಮತ್ತು ಯುಎಸ್ ಎ ಗಳು ಆತಂಕ, ಸ್ಕಿಜೋಫ್ರೇನಿಯಾ ಮತ್ತು ದ್ವಿಧ್ರುವಿ ಅಸ್ವಸ್ಥತೆಯನ್ನು ಹೊಂದಿರುವ ಹೆಚ್ಚು ಖಿನ್ನತೆ ಪೀಡಿತ ದೇಶಗಳಾಗಿವೆ.

1. ಭಾರತ

NCMH (ನ್ಯಾಷನಲ್ ಕೇರ್ ಆಫ್ ಮೆಡಿಕಲ್ ಹೆಲ್ತ್) ಗಾಗಿ WHO ನಡೆಸಿದ ಒಂದು ಅಧ್ಯಯನವು, ಕನಿಷ್ಠ 6.5 ರಷ್ಟು ಭಾರತೀಯ ಜನಸಂಖ್ಯೆಯು, ಗ್ರಾಮೀಣ- ನಗರ ಪ್ರದೇಶಗಳ ವ್ಯತ್ಯಾಸವಿಲ್ಲದೆ ಮಾನಸಿಕ ಅಸ್ವಸ್ಥತೆಯಿಂದ ಗಂಭೀರವಾಗಿ ಬಳಲುತ್ತಿದೆ ಎಂದು ಹೇಳಿದೆ. ಪರಿಣಾಮಕಾರಿ ಕ್ರಮಗಳು ಮತ್ತು ಚಿಕಿತ್ಸೆಗಳಿದ್ದರೂ ಮನೋವಿಜ್ಞಾನಿಗಳು, ವೈದ್ಯರು ಮತ್ತು ಮನೋವೈದ್ಯರುಗಳಂತಹ ಮಾನಸಿಕ ಆರೋಗ್ಯ ತಜ್ಞರ ತೀವ್ರ ಕೊರತೆ ಇದೆ. 2014 ರಲ್ಲಿ , ಇದು ಹತ್ತು ಲಕ್ಷ ಜನರಲ್ಲಿ ಒಂದು” ಎಂಬಷ್ಟು ಕಡಿಮೆ ಅನುಪಾತದಲ್ಲಿತ್ತು‌ ಆದರೆ 2018ರ ಅಂಕಿ ಅಂಶಗಳು ಆಘಾತಕಾರಿಯಾಗಿದೆ.

2. ಚೀನಾ

ಖಿನ್ನತೆಯಂತಹ ಮಾನಸಿಕ ಅಸ್ವಸ್ಥತೆಯಿರುವ ಚೀನಾದವರಲ್ಲಿ 91.8 ರಷ್ಟು ಜನರು ತಮ್ಮ ಮಾನಸಿಕ ಸ್ಥಿತಿಗೆ ಎಂದಿಗೂ ಸಹಾಯವನ್ನು ಪಡೆಯುವುದಿಲ್ಲ ಎಂದು WHO ಅಂದಾಜಿಸಿದೆ. ಚೀನಾ ಖಿನ್ನತೆ ಮತ್ತು ಆತಂಕ ರೋಗಿಗಳ ದೊಡ್ಡ ಸಂಖ್ಯೆಯ ಎರಡನೇ ಅತಿ ದೊಡ್ಡ ದೇಶವಾಗಿದೆ. ಈ ಪರಿಸ್ಥಿತಿಯು ಭಾರತಕ್ಕೂ ಹೋಲುತ್ತದೆ. ದೇಶವು ತಮ್ಮ ಬಜೆಟ್ ನ 2.35 ಶೇಕಡದಷ್ಟು ಮಾತ್ರ ಮಾನಸಿಕ ಆರೋಗ್ಯಕ್ಕೆ ವ್ಯಯಿಸುತ್ತದೆ.

3. ಅಮೆರಿಕ

ಮಾನಸಿಕ ಅಸ್ವಸ್ಥತೆಯ ರಾಷ್ಟ್ರೀಯ ಅಲೈಯನ್ಸ್ ಪ್ರಕಾರ ಯು.ಎಸ್ ನ ಐದು ವಯಸ್ಕರಲ್ಲಿ ಒಬ್ಬರು ಪ್ರತಿ ವರ್ಷ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾರೆ. ಆದರೆ ಕಳೆದ ವರ್ಷದಲ್ಲಿ ಪೀಡಿತರಾದ 41% ರಷ್ಟು ಮಂದಿ ಮಾನಸಿಕ ಆರೋಗ್ಯ ಅಥವಾ ಅದಕ್ಕೆ ಬೇಕಾದ ಪೂರಕ ಸೇವೆಗಳನ್ನು ಪಡೆದಿದ್ದಾರೆ.ಆದಾಗ್ಯೂ ವೈದ್ಯಕೀಯ ವೃತ್ತಿಪರರ ಕೊರತೆಯಿದೆ.

4. ಬ್ರೆಜಿಲ್

ಲ್ಯಾಟಿನ್ ಅಮೆರಿಕಾದಲ್ಲಿ ಬ್ರೆಜಿಲ್ ದೇಶವು ಹೆಚ್ಚು ಖಿನ್ನತೆಗೆ ಒಳಗಾದ ಜನಸಂಖ್ಯೆಯನ್ನು ಹೊಂದಿದೆ. ವಿಶೇಷವಾಗಿ ಈ ದೇಶದಲ್ಲಿನ ಹಿಂಸಾತ್ಮಕ, ವಲಸೆ ಮತ್ತು ನಿರಾಶ್ರಿತ ಈ ಮುಂತಾದ ಕೆಲವು ಪ್ರಮುಖ ಸಾಮಾಜಿಕ ಅಂಶಗಳು ಇಲ್ಲಿನ ಬಹುಸಂಖ್ಯಾತ ಜನರನ್ನು ಖಿನ್ನತೆ ಮತ್ತು ಆತಂಕದ ಅಸ್ವಸ್ಥತೆಗಳಿಗೆ ಒಳಗಾಗುವಂತೆ ಮಾಡುತ್ತದೆ.

5. ಇಂಡೋನೇಷ್ಯಾ

ಇಂಡೋನೇಷ್ಯಾದಲ್ಲಿ ಸುಮಾರು 3.7 ರಷ್ಟು ಜನಸಂಖ್ಯೆ ಅಥವಾ ಒಂಬತ್ತು ದಶಲಕ್ಷ ಜನರು ಖಿನ್ನತೆಯಿಂದ ಬಳಲುತ್ತಿದ್ದಾರೆ. ಉದ್ವೇಗ ಮತ್ತು ಆತಂಕದ ಪರಿಸ್ಥಿತಿಗೆ ಅನುಗುಣವಾಗಿ ಇದರ ಅನುಪಾತದಲ್ಲಿ ಏರುಪೇರುಗಳು ಸಂಭವಿಸುತ್ತವೆ

6. ರಷ್ಯಾ

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ರಷ್ಯಾದ ಜನಸಂಖ್ಯೆಯ 5.5 ಶೇಕಡ ಜನಸಂಖ್ಯೆ ಖಿನ್ನತೆ ಹೊಂದಿದೆ. 2012 ರಲ್ಲಿ ವರದಿ ಮಾಡಿದಂತೆ, ಹದಿಹರೆಯದ ಆತ್ಮಹತ್ಯೆಯ ಪ್ರಮಾಣವು ವಿಶ್ವದ ಸರಾಸರಿಗಿಂತ ಮೂರು ಪಟ್ಟು ಅಧಿಕವಾಗಿದೆ, ಇದು ಸ್ಪಷ್ಟವಾಗಿ ರಷ್ಯಾದಲ್ಲಿ ಕಡಿಮೆ ಮಾನಸಿಕ ಆರೋಗ್ಯದ ಗಂಭೀರ ಸಮಸ್ಯೆಯನ್ನು ಚಿತ್ರಿಸುತ್ತದೆ.

7. ಪಾಕಿಸ್ತಾನ

2012 ರಲ್ಲಿ ವರದಿ ಮಾಡಿದಂತೆ, ಪಾಕಿಸ್ತಾನದಲ್ಲಿ ಕೇವಲ 750 ನುರಿತ ಮನೋರೋಗ ತಜ್ಞರು ಮಾತ್ರ ಇದ್ದಾರೆ ಎನ್ನುವುದು ಅತ್ಯಂತ ಆಘಾತಕಾರಿ ಅಂಶ. ದೇಶದಲ್ಲಿ ಹೆಚ್ಚಿನ ಸಾಮಾಜಿಕ ರಾಜಕೀಯ ಅನಸ್ಥೆಯ ಕಾರಣ ಮಾನಸಿಕ ಅಸ್ವಸ್ಥತೆಯ ಪ್ರಕರಣಗಳು ಸಾಮಾನ್ಯವಾಗಿ ವರದಿಯಾಗಿಲ್ಲ, ಆದ್ದರಿಂದ ಖಿನ್ನತೆಯಿಂದ ಬಳಲುತ್ತಿರುವ ರೋಗಿಗಳ ನಿಖರವಾದ ಸಂಖ್ಯೆಬಹಿರಂಗವಾಗಿಲ್ಲ. 

ಖಿನ್ನತೆಯ ಬಗ್ಗೆ ಕೆಲವು ಆಘಾತಕಾರಿ ಅಂಕಿ ಅಂಶಗಳು:

ಜಗತ್ತಿನ ಎಲ್ಲಾ ರಾಷ್ಟ್ರಗಳ ಸರಾಸರಿ ನೋಡಿದರೆ , 10-19 ವರ್ಷ ವಯಸ್ಸಿನ ಪ್ರತಿ ಆರು ಜನರಲ್ಲಿ ಒಬ್ಬರು ಖಿನ್ನತೆಯಿಂದ ಬಳಲುತ್ತಿದ್ದಾರೆ.
ಎಲ್ಲಾ ಮಾನಸಿಕ ಆರೋಗ್ಯ ಪರಿಸ್ಥಿತಿಗಳಲ್ಲಿ ಅರ್ಧದಷ್ಟು 14 ವರ್ಷ ವಯಸ್ಸಿನಿಂದ ಪ್ರಾರಂಭವಾಗುತ್ತದೆ ಮತ್ತು ಅದರಲ್ಲಿ ಹೆಚ್ಚಿನವು ಚಿಕಿತ್ಸೆ ಕಂಡುಹಿಡಿಯದ ಮತ್ತು ಜಾಗತಿಕವಾಗಿ ಸರಿಯಾದ ಚಿಕಿತ್ಸೆ ಸಿಗದವುಗಳಾಗಿವೆ.
ಹದಿಹರೆಯದವರಲ್ಲಿ ಅನಾರೋಗ್ಯ ಮತ್ತು ಅಸಾಮರ್ಥ್ಯದ ಪ್ರಮುಖ ಕಾರಣಗಳಲ್ಲಿ ಖಿನ್ನತೆಯು ಒಂದು.
15-19 ವರ್ಷ-ವಯಸ್ಸಿನವರಲ್ಲಿ ಕಂಡುಬರುವ ಆತ್ಮಹತ್ಯೆಯು ಸಾವಿನ ಮೂರನೇ ಪ್ರಮುಖ ಕಾರಣವಾಗಿದೆ.

ಹದಿಹರೆಯದ ಮಾನಸಿಕ ಆರೋಗ್ಯ ಪರಿಸ್ಥಿತಿಗಳನ್ನು ಸಮಾಜ ಅರ್ಥೈಸಿಕೊಳ್ಳದ ಕಾರಣ ಅದರ ಪರಿಣಾಮಗಳು ಪ್ರೌಢಾವಸ್ಥೆಗೆ ವಿಸ್ತರಿಸುತ್ತವೆ, ಭೌತಿಕ ಮತ್ತು ಮಾನಸಿಕ ಆರೋಗ್ಯವನ್ನು ದುರ್ಬಲಗೊಳಿಸುತ್ತವೆ ಮತ್ತು ಹೆಚ್ಚು ವರ್ಷ ಆರೋಗ್ಯವಂತರಾಗಿ ಜೀವಿಸುವ ಅವಕಾಶಗಳನ್ನು ಸೀಮಿತಗೊಳಿಸುತ್ತದೆ. ಇದರ ಬಗ್ಗೆ ಎಲ್ಲಾ ರಾಷ್ಟ್ರಗಳೂ ನಿಗಾ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಆಗ್ರಹಿಸಿದೆ.

LEAVE A REPLY

Please enter your comment!
Please enter your name here