ಅಂತರ್ಜಾತಿ ವಿವಾಹ : ಗರ್ಭಿಣಿ ಮಗಳನ್ನು ಬೆಂಕಿ ಹಚ್ಚಿ ಕೊಂದ ತಂದೆ

0
1353

ತಮ್ಮ ಮಾತನ್ನು ಮೀರಿ ಅಂತರ್ಜಾತೀಯ ಹುಡುಗನನ್ನು ವಿವಾಹವಾದಳೆಂದು ತಂದೆಯೊಬ್ಬ ಮಗಳು- ಅಳಿಯನಿಗೆ ಬೆಂಕಿ ಹಚ್ಚಿದ ದಾರುಣ ಘಟನೆ ಮಹಾರಾಷ್ಟ್ರದ ಅಹಮದ್ ನಗರದಲ್ಲಿ ನಡೆದಿದೆ. ಪರಿಣಾಮ 19 ವರ್ಷ ವಯಸ್ಸಿನ ಮಗಳು ರುಕ್ಮಿಣಿ ಸಾವನ್ನಪ್ಪಿದ್ದು, ಅಳಿಯ 23 ವರ್ಷ ವಯಸ್ಸಿನ ಮಂಗೇಶನು ಚಿಂತಾಜನಕ ಸ್ಥಿತಿಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆ.

ಹೆತ್ತವರಿಗೆ ವಿರುದ್ಧವಾಗಿ ತನ್ನ ಪ್ರಿಯತಮ ಮಂಗೇಶನನ್ನು ಮದುವೆಯಾಗಿದ್ದ ರುಕ್ಮಿಣಿ, ಪುಣೆಯಿಂದ 60 ಕಿ.ಮೀ ದೂರವಿರುವ ಅಹ್ಮದ್ ನಗರ ಜಿಲ್ಲೆಯ ಪಾರ್ನರ್ ತಾಲೂಕಿನ ನಿಘೋಜ್ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದಳು. ಮಂಗೇಶ್ ನೋಮಾಡಿಕ್ ಎನ್ನುವ ಕೆಳ ಜಾತಿಯವನಾಗಿದ್ದು , ರುಕ್ಮಿಣಿಯು ಮೂಲತಃ ಉತ್ತರಪ್ರದೇಶದವಳಾಗಿದ್ದು, ಪಾಶಿ ಎನ್ನುವ ಜಾತಿಗೆ ಸೇರಿದವಳಾಗಿದ್ದಾಳೆ.

ಆರು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಈ ಜೋಡಿಗೆ ಜಾತಿ ಗೋಡೆ ಅಡ್ಡ ಬಂದು ,ಇವರಿಬ್ಬರ ಸುಂದರ ಬದುಕಿಗೆ ಕೊಳ್ಳಿ ಇಟ್ಟಿದೆ. ರುಕ್ಮಿಣಿಯು 2 ತಿಂಗಳ ಬಸುರಿಯಾಗಿದ್ದಳು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲೀಸರು, ರುಕ್ಮಿಣಿಯ ಚಿಕ್ಕಪ್ಪರಾದ ಸುರೇಂದ್ರ ಭರಾಟಿಯಾ ಮತ್ತು ಘನ್ ಶ್ಯಾಂ ಸರೋಜ್ ರವರನ್ನು ಬಂಧಿಸಿದ್ದಾರೆ. ತಂದೆ ತಲೆ ಮರೆಸಿಕೊಂಡಿದ್ದು ಶೀಘ್ರದಲ್ಲೇ ಸೆರೆ ಹಿಡಿಯುವುದಾಗಿ ಪೊಲೀಸರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here