ಹೆಂಡತಿ ಬಿಜೆಪಿ , ತಂದೆ ಹಾಗೂ ಸಹೋದರಿ ಕಾಂಗ್ರೆಸ್ : ಇಕ್ಕಟ್ಟಿನಲ್ಲಿ ಕ್ರಿಕೆಟರ್ ರವೀಂದ್ರ ಜಡೇಜ

0
1410

ಭಾರತದ ಕ್ರಿಕೆಟರ್ ಹಾಗೂ ಐಪಿಲ್ ನ ಚೆನ್ನೈ ತಂಡದ ಆಟಗಾರ ರವೀಂದ್ರ ಜಡೇಜಾ ಪತ್ನಿ ಇತ್ತೀಚೆಗೆ ತಾನೆ ಬಿಜೆಪಿಗೆ ಸೇರಿದ್ದರು. ಇದೀಗ ಜಡೇಜಾ ತಂದೆ ಮತ್ತು ಸಹೋದರಿ ಭಾನುವಾರ ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಪಕ್ಷದ ಮುಖಂಡ ಮತ್ತು ಪಾಟೀದರ್ ಯುವ ನಾಯಕ ಹಾರ್ದಿಕ್ ಪಟೇಲ್ ಅವರ ಉಪಸ್ಥಿತಿಯಲ್ಲಿ ಪಕ್ಷಕ್ಕೆ ಅಧಿಕೃತವಾಗಿ ಸೇರಿದ್ದಾರೆ.

 

ಜಡೇಜಾ ಅವರ ತಂದೆ, ಅನಿರುದ್ಸಿನ್ ಮತ್ತು ಸಹೋದರಿ ನೈನಬಾ, ಜಾಮ್ನಗರ್ ಜಿಲ್ಲೆಯ ಕಲಾವದ್ ನಗರದಲ್ಲಿ ಚುನಾವಣಾ ರ್ಯಾಲಿಯಲ್ಲಿ ಜಾಮ್ನಗರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುಲು ಕಂಡೋರಿಯಾ ಉಪಸ್ಥಿತಿಯಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಕಳೆದ ತಿಂಗಳು ಮಾರ್ಚ್ 3 ರಂದು ಜಡೇಜಾ ಪತ್ನಿ ರಿವಾಬಾ ಅವರು ಜಾಮನಗರ್ ದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.

ಇದೀಗ ಕುಟುಂಬದಲ್ಲಿ ಈ‌ ರೀತಿಯ ಅನಿರೀಕ್ಷಿತ ಘಟನೆಗಳಿಂದ ಜಡೇಜಾ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದೆ. ಗುಜರಾತ್ ನಲ್ಲಿ 26 ಲೋಕಸಭಾ ಸ್ಥಾನಗಳಿಗೆ ಮತದಾನವು ಏಪ್ರಿಲ್ 23 ರಂದು ಮೂರನೇ ಹಂತದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here