ಶ್ರೀಲಂಕಾದ ವಿವಿಧೆಡೆ ಬಾಂಬ್ ಸ್ಪೋಟ : 52 ಮಂದಿ ಬಲಿ ,280 ಮಂದಿಗೆ ಗಾಯ

0
142

ಕೊಲಂಬೋ: ಈಸ್ಟರ್ ಸಂಡೆ ದಿನವಾದ ಇಂದು (ಏ. 21) ಶ್ರೀಲಂಕಾದ ಮೂರು ಚರ್ಚುಗಳು ಮತ್ತು ಮೂರು ಹೋಟೆಲ್ ಗಳಲ್ಲಿ ಸಂಭವಿಸಿದ ಭೀಕರ ಸ್ಪೋಟದಲ್ಲಿ 52ಕ್ಕೂ ಹೆಚ್ಚಿನ ಜನರು ಅಸುನೀಗಿದ್ದು, 280 ಮಂದಿ ಗಾಯಗೊಂಡಿದ್ದಾರೆ. 

ಈಸ್ಟರ್ ಭಾನುವಾರದ ದಿನ ಚರ್ಚುಗಳಲ್ಲಿ ಜನ ಜಂಗುಳಿ ಅಧಿಕವಾಗಿತ್ತು. ಸ್ಥಳೀಯ ಕಾಲಮಾನ ಬೆಳಿಗ್ಗೆ 8.45ರ ಸುಮಾರಿಗೆ ಸ್ಫೋಟ ಸಂಭವಿಸಿದೆ ಎಂದು ಪೋಲೀಸ್ ವಕ್ತಾರ ರುವಾನ್ ಗುಣಶೇಖರ ಹೇಳಿದ್ದಾರೆ.

ಪಶ್ಚಿಮ ಕರಾವಳಿ ಪಟ್ಟಣವಾದ ನೆಗೋಂಬೊದಲ್ಲಿರುವ ಸೇಂಟ್ ಸೆಬಾಸ್ಟಿಯನ್ಸ್ ಚರ್ಚ್ ಮತ್ತು ಪೂರ್ವದ ಬ್ಯಾಟಿಕೊಲೊದಲ್ಲಿರುವ ಮತ್ತೊಂದು ಚರ್ಚ್ ಹಾಗೂ ಕೊಲೊಂಬೊದಲ್ಲಿನ ಸೇಂಟ್ ಅಂತೋನಿ ಚರ್ಚ್ ನಲ್ಲಿ ಸ್ಪೋಟ ಸಂಭವಿಸಿದೆ. ಅಲ್ಲದೆ ಪಂಚತಾರಾ ಹೋಟೆಲುಗಳಾದ ಶಾಂಗ್ರಿಲಾ, ಸಿನ್ನಮೋನ್ ಗ್ರಾಂಡ್ ಮತ್ತು ಕಿಂಗ್ಸ್ ಬರಿ ಗಳನ್ನು ಗುರಿಯಾಗಿಸಿಕೊಂಡು ಸ್ಪೋಟ ನಡೆಸಲಾಗಿದೆ.

ಕೊಲಂಬೊ ರಾಷ್ಟ್ರೀಯ ಆಸ್ಪತ್ರೆಯ ವಕ್ತಾರ ಡಾ. ಸಮ್ಮಿದಿ ಸಮರಕೂನ್ ಘಟನೆ ಬಗ್ಗೆ ಮಾತನಾಡುತ್ತಾ , ಸುಮಾರು 280 ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿದೆ ಎಂದಿದ್ದಾರೆ.

“ನಮ್ಮ ಚರ್ಚ್ ಗಳ ಮೇಲೆ ಬಾಂಬ್ ದಾಳಿಯಾಗಿದೆ, ದಯಮಾಡಿ ಬಂದು ಸಹಾಯ ಮಾಡಿ” ಎಂದು ಪಶ್ಚಿಮದ ಕರಾವಳಿ ಪಟ್ಟಣವಾದ ನೆಗೋಂಬೊದಲ್ಲಿನ ಸೇಂಟ್ ಸೆಬಾಸ್ಟಿಯನ್ ಚರ್ಚ್ ನ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here