3000 ಕೋಟಿ ರೂಪಾಯಿಯ ಸರ್ದಾರ್ ಪ್ರತಿಮೆಯೊಳಗೆ ನೀರು ಸೋರಿಕೆ : ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ

0
774

ಸೋಷಿಯಲ್ ಮೀಡಿಯಾದಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಿದ ಪ್ರವಾಸಿಗರು ಹೇಳುವಂತೆ ಗುಜರಾತ್‌ನ ಸರ್ದಾರ್ ವಲ್ಲಭಭಾಯ್ ಪಟೇಲ್  ಏಕತಾ  ಪ್ರತಿಮೆಯಲ್ಲಿನ ವೀಕ್ಷಣಾ ಗ್ಯಾಲರಿಯೊಳಗೆ ಮಳೆನೀರು ಸುರಿಯುತ್ತಿರುವುದು ಕಂಡುಬಂದಿದೆ.

3,000 ಕೋಟಿ ರೂಪಾಯಿಗಳಿಂದ ನಿರ್ಮಿತವಾದಂತಹ  ಪ್ರತಿಮೆಯ ಮೇಲ್ಛಾವಣಿಯಿಂದ ಬೀಳುತ್ತಿರುವ ಮತ್ತು ನೆಲದ ಮೇಲಿನ ಕೊಳಚೆ ನೀರು  ಅನೇಕರಿಂದ ಟೀಕೆಗೆ ಗುರಿಯಾಗಿದೆ. ಇಷ್ಟೊಂದು ವೆಚ್ಚದಲ್ಲಿ ನಿರ್ಮಾಣವಾಗಿದ್ದರೂ ಈ ರೀತಿಯ ಅವ್ಯವಸ್ಥೆಯನ್ನು ಕಂಡು ದುರದೃಷ್ಟಕರ ಎಂದು ಪ್ರವಾಸಿಗರು ಬೇಸರ ವ್ಯಕ್ತಪಡಿಸಿದ್ದಾರೆ.

182 ಮೀಟರ್ ಎತ್ತರದ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಸ್ಮಾರಕವಾದ ಈ ಪ್ರತಿಮೆ ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯಾಗಿದ್ದು, ಕಳೆದ ವರ್ಷ  ಉದ್ಘಾಟನೆಯಾಗಿದೆ.

“ನಾವು ವಿಶ್ವದ ಅತಿ ಎತ್ತರದ ಪ್ರತಿಮೆಯನ್ನು ನೋಡಬೇಕೆಂಬ ಭರವಸೆಯೊಂದಿಗೆ ಬಂದಿದ್ದೆವು. ಆದರೆ ಮಳೆ ನೀರಿನ ಸೋರಿಕೆಯಿಂದಾಗಿ ಪ್ರತಿಮೆಯನ್ನು ನೋಡುವ ಪ್ರತೀಕ್ಷೆಗಳೆಲ್ಲಾ  ಹುಸಿಯಾಗಿವೆ.  ಭಾರಿ ಮಳೆಯಾಗಿಲ್ಲ ಆದರೂ  ಈಗಾಗಲೇ ಪ್ರತಿಮೆಯ ಮುಖ್ಯ ಹಾಲ್ ಮತ್ತು ವೀಕ್ಷಣಾ ಗ್ಯಾಲರಿಯು ನೀರಿನಿಂದ ತುಂಬಿದೆ. ಇದು ನಿಜಕ್ಕೂ ದುರದೃಷ್ಟಕರ, “ಎಂದು ಪ್ರವಾಸಿಗರು ಸುದ್ದಿ ಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ  ವಿಷಾದ ವ್ಯಕ್ತಪಡಿಸಿದ್ದಾರೆ.

ಪ್ರಮುಖ ಯೂಟ್ಯೂಬರ್ ಹಾಗೂ ಸಾಮಾಜಿಕ ಕಾರ್ಯಕರ್ತ  ಧ್ರುವ್ ರಾಥೀ ಈ ಘಟನೆಗೆ ಸಂಬಂಧಿಸಿ ಅಧಿಕಾರಿಗಳನ್ನು ಟೀಕಿಸಿದ್ದು,  “ಒಂದು ಮಳೆ ಬಂದರೆ  ಪ್ರವಾಹಕ್ಕೆ ಒಳಗಾದಂತಾಗುತ್ತದೆ. ಮೇಲ್ಛಾವಣಿಯಿಂದ ಮತ್ತು ಮುಂಭಾಗದಿಂದ ನೀರು ಸೋರಿಕೆಯಾಗುತ್ತಿದೆ.   ಬರೀ ಒಂದು ಮಳೆಯಿಂದ  ಪ್ರತಿಮೆಗೆ ಹಾನಿ  ಉಂಟಾಗದಂತೆ ತಡೆಯಲು ಪ್ರತಿಮೆಯ ವಿನ್ಯಾಸಕರಿಂದ  ಸಾಧ್ಯವಾಗದ್ದು ನಾಚಿಕೆಗೇಡಿನ ವಿಷಯ ” ಎಂದು ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ  ವ್ಯಂಗ್ಯವಾಡಿದ್ದಾರೆ .

 

 

 

 

LEAVE A REPLY

Please enter your comment!
Please enter your name here