ಅನಿವಾಸಿ ಕನ್ನಡಿಗರನ್ನು ಹೊತ್ತುಕೊಂಡ ಮೊದಲ ವಿಮಾನ ಯಶಸ್ವಿ ಹಾರಾಟ: ಎಐಎಂಡಿಎಫ್ ಮಾನವೀಯ ಸೇವೆಗೆ ಭಾರೀ ಪ್ರಶಂಸೆ

0
607
  • ಲಾಕ್ ಡೌನ್ ನಿಂದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ನ‌ ದುಬೈ ಶಾರ್ಜಾ ಮುಂತಾದ ಕಡೆ ಸಂತ್ರಸ್ತರಾಗಿ ಸಂಕಷ್ಟದಲ್ಲಿದ್ದ ಅನಿವಾಸಿ ಕನ್ನಡಿಗರನ್ನು ಮರಳಿ ತಾಯ್ನಾಡಿಗೆ ಕರೆ ತರುವ ನಮ್ಮ ಮೊದಲ ಪ್ರಯತ್ನ ಫಲಕೊಟ್ಟಿದೆ.

ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಸಂಘಟನೆಯ ಮೊದಲ ಪ್ರಯತ್ನದ ಫಲವಾಗಿ ಕೆಸಿಎಫ್ ಸಹಯೋಗದೊಂದಿಗೆ ಅರವತ್ತು ವರ್ಷ ಮೇಲ್ಪಟ್ಟ ಹಿರಿಯರು , ಗರ್ಭಿಣಿ ಮಹಿಳೆಯರು ಅನಾರೋಗ್ಯ ಪೀಡಿತರು, ಸಣ್ಣ ಮಕ್ಕಳು ಹಾಗೂ ಅತ್ಯಾವಶ್ಯಕವಾಗಿ ಊರಿಗೆ ಹೋಗಬೇಕಾದವರನ್ನು ಹೊತ್ತುಕೊಂಡ ಮೊದಲ ವಿಮಾನ ಮಂಗಳೂರು ತಲುಪಿದೆ ಅಲ್ಹಮ್ದುಲಿಲ್ಲಾಹ್. ಇದರ ಹಿಂದೆ ದುಬೈಯಲ್ಲಿ ಸಹಕರಿಸಿದ ದುಬೈ ಕೆಸಿಎಫ್ ತಂಡಕ್ಕೂ ಮತ್ತು ವಿಶೇಷವಾಗಿ ಇದರ ಬೆನ್ನು ಹಿಡಿದು ಎಲ್ಲಾ ಕೆಲಸವನ್ನು One Man Army ಆಗಿ ನಡೆಸಿಕೊಟ್ಟ ನಮ್ಮ ಎಐಎಂಡಿಎಫ್ ರಾಷ್ಟ್ರೀಯ ವಕ್ತಾರ Muzaffer Shaikh ಅವರಿಗೂ ಸಯ್ಯದ್ ನೌಫಿಲ್ , ಬಶೀರ್ ಕೋಟೇಶ್ವರ್ , ರಹೂಫ್ ಕೊಟೇಶ್ವರ್ , ಅಲಿ ಕೂಲೂರು , ಅಝರ್ , ಮುಹಮ್ಮದ್ ಲತೀಪ್ ಮುಂತಾದವರೆಲ್ಲರಿಗೂ ಧನ್ಯವಾದಗಳು.

ಪ್ರಕಟಣೆ :

ಮುಹಮ್ಮದ್ ದಾನಿಶ್ – IT CELL HEAD AIMDF KARNATAKA

LEAVE A REPLY

Please enter your comment!
Please enter your name here