ತಂದೆಯ ಪ್ರಾಣ ಉಳಿಸಲು ಈ ಮಗಳು ಮಾಡಿದ್ದೇನು ಗೊತ್ತಾ? : ಕಣ್ಣಂಚು ತೇವಗೊಳ್ಳುತ್ತದೆ ಮಗಳ ಈ ಕಾರ್ಯಕ್ಕೆ

0
672

ತಮ್ಮ ಮಕ್ಕಳಿಗೆ ಕಷ್ಟ ಎಂದು ಬಂದಾಗ ಹೆತ್ತವರು ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಅಷ್ಟೇ ಯಾಕೆ ತಮ್ಮ ಪ್ರಾಣವನ್ನು ಕೊಟ್ಟಾದರೂ ಮಗುವಿನ ಪ್ರಾಣವನ್ನು ಉಳಿಸುತ್ತಾರೆ. ಆದರೆ ತಂದೆ ತಾಯಿಗೋಸ್ಕರ ಮಕ್ಕಳು ಇಂತಹ ಕೆಲಸ ಮಾಡುವುದು ಅಪರೂಪವೇ ಸರಿ. ಅಂತದ್ದರಲ್ಲಿ 19 ವರ್ಷದ ಮಗಳೊಬ್ಬಳು ತನ್ನ ತಂದೆಯ ಜೀವ ಉಳಿಸಲು ಮಾಡಿದ ಕೆಲಸಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೊಲ್ಕತ್ತಾ ಮೂಲದ 19 ವರ್ಷದ ಯುವತಿ ರಾಖಿ ದತ್ತಾ ತನ್ನ ತಂದೆಯ ಜೀವ ಉಳಿಸಲು ತನ್ನ ಲಿವರ್ ದಾನ ಮಾಡಿದ್ದಾರೆ. ಈ ಬಗ್ಗೆ ಹರ್ಷ ಗೋಯೆಂಕಾ ಎನ್ನುವ ಉದ್ಯಮಿಯೊಬ್ಬರು ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದು , ಈ ಟ್ವೀಟ್ ಗೆ 22 ಸಾವಿರ ಲೈಕ್ಸ್ ಗಳು ದೊರೆತಿದ್ದು , 5 ಸಾವಿರಕ್ಕೂ ಹೆಚ್ಚು ಬಾರಿ ರಿಟ್ವೀಟ್ ಆಗಿದೆ. ಈ ಟ್ವೀಟ್ ವೈರಲಾಗುತ್ತಿದ್ದಂತೆ ಆಕೆಯ ಕಾರ್ಯಕ್ಕೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ.

19 ವರ್ಷದ ರಾಖಿ ದತ್ತಾ ತೀವ್ರ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ತನ್ನ ತಂದೆಗೆ ತನ್ನ 65% ದಷ್ಟು ಲಿವರ್ ದಾನ ಮಾಡಿದ್ದಾಳೆ. ಅದರಿಂದಾಗುವ ಕಲೆ, ನೋವು, ಭವಿಷ್ಯದಲ್ಲಿ ಉಂಟಾಗುವ ಸಮಸ್ಯೆ ಇದ್ಯಾವುದರ ಬಗ್ಗೆಯೂ ಆಕೆ ತಲೆ ಕೆಡಿಸಿಕೊಳ್ಳಲಿಲ್ಲ. ಒಬ್ಬ ತಂದೆಗೆ ಮಗಳ ಪ್ರೀತಿ ಯಾವಾಗಲೂ ವಿಶೇಷವಾಗಿಯೇ ಇರುತ್ತದೆ. ಮಗಳನ್ನು ನಿಷ್ಪ್ರಯೋಜಕರು ಎಂದು ಹೇಳುವವರಿಗೆ ಇದುವೇ ಸರಿಯಾದ ಉತ್ತರ ಎಂದು ಹರ್ಷ ಗೋಯೆಂಕಾ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಎಷ್ಟೊಂದು ವೈರಲ್ ಆಗಿದೆ ಎಂದರೆ ತಂದೆ ಮಗಳ ಈ ಭಾವನಾತ್ಮಕ ಸಂಬಂಧ ಕಂಡು ಪ್ರತಿಯೊಬ್ಬರೂ ಆಕೆಗಾಗಿ ಪ್ರಾರ್ಥಿಸುತ್ತಿದ್ದಾರೆ. ಅಲ್ಲದೆ ತಂದೆ ಮಗಳು ಯಾವಾಗಲೂ ಆರೋಗ್ಯದಿಂದ ಇರಲಿ ಎಂದು ಹಾರೈಸುತ್ತಿದ್ದಾರೆ.

ರಿಯಾ ರಿವೇಲ್ಡ್ ಎಂಬುವರು ಗೋಯೆಂಕ್ ರವರ ಟ್ವೀಟ್ ಗೆ ಪ್ರತಿಕ್ರಿಯಿಸಿ ಈ ಕಥೆ ನನಗೆ ನನ್ನ ತಂದೆಯ ನೆನಪನ್ನ ತಂದುಕೊಡುತ್ತದೆ. ಆದರೆ ಇಂತಹ ಧೈರ್ಯದ ನಿರ್ಧಾರವನ್ನ ಮಗಳಿಂದ ಮಾತ್ರ ತೆಗೆದುಕೊಳ್ಳಲು ಸಾಧ್ಯವೆಂದಿದ್ದಾರೆ.

LEAVE A REPLY

Please enter your comment!
Please enter your name here