ಚಿಕ್ಕಮಗಳೂರು: ಕ್ರೈಂ ಬ್ರಾಂಚ್ ಕಚೇರಿಯ ಆವರಣಕ್ಕೆ ಇಂಟರ್ಲಾಕ್ ಹಾಕಿಸಿದ AIMDF ಸಂಘಟನೆ

0
434

ಮಳೆಗಾಲದಲ್ಲಿ ನಡೆದಾಡಲೂ ಕೂಡ ಅಸಾಧ್ಯವಾಗಿದ್ದ ಚಿಕ್ಕಮಗಳೂರಿನ ಅಪರಾಧ ಪತ್ತೆ ದಳ ( Crime Branch ) ಪೊಲೀಸ್ ಠಾಣೆಗೆ ಸರಿಸುಮಾರು
60 ಸಾವಿರ ವೆಚ್ಚದಲ್ಲಿ ಇಂಟರ್ಲಾಕ್ ಅಳವಡಿಸುವ ಮುಖಾಂತರ ನಮ್ಮ ಸಂಘಟನೆಯ ಸಾಮಾಜಿಕ ಕಾಳಜಿಯ ಕಾರ್ಯಕ್ರಮಕ್ಕೆ ಮೆರುಗು ನೀಡಿರುವ ನಮ್ಮ ಸಂಘಟನೆಯ ರಾಜ್ಯಾಧ್ಯಕ್ಷ ಜನಾಬ್ ನಸೀರ್ ಅಹ್ಮದ್ ಚಿಕ್ಕಮಗಳೂರು ಇವರಿಗೆ ಅನಂತ ಅನಂತ ಕೃತಜ್ಞತೆಗಳು..
ಇವರ ಈ ಸಮಾಜಮುಖಿ ಕಾರ್ಯಕ್ರಮಕ್ಕೆ ಸಂಘಟನೆಯ ಎಲ್ಲ ಕಾರ್ಯಕರ್ತರು ಹಾಗೂ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದು ಹಗಲಿರುಳು ನಮ್ಮ ಸುರಕ್ಷತೆಗಾಗಿ ತಮ್ಮ ಜೀವದ ಪಣ ತೊಟ್ಟು ಕರ್ತವ್ಯ ನಿರ್ವಹಿಸುವ ಪೊಲೀಸ್ ಇಲಾಖೆಗೆ ಕಷ್ಟ ಕಾಲದಲ್ಲಿ ಸಹಕರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ಅದನ್ನು ನಾವು ಸಾಧ್ಯವಾದಷ್ಟು ಕಾರ್ಯಗತಗೊಳಿಸಬೇಕಾಗಿದೆ. ನಮ್ಮ ದೇಶದಲ್ಲಿ ಪೊಲೀಸ್ ಠಾಣೆಗಳಿಗೆ ಸರಿಯಾದ ಮೂಲಭೂತ ಸೌಲಭ್ಯಗಳಿಲ್ಲ , ವಿದೇಶಗಳಿಗೆ ಹೋಲಿಸಿದರೆ ನಮ್ಮ ದೇಶದ ಪೊಲೀಸ್ ಠಾಣೆಗಳ ಗುಣಮಟ್ಟ ತೀರಾ ಕಳಪೆ ಆಗಿದ್ದು ಸರಕಾರದ ದಿವ್ಯ ನಿರ್ಲಕ್ಷ್ಯ ಎದ್ದು ಕಾಣ್ತಾ ಇದೆ. ಹೆಚ್ಚಿನ ಪೊಲೀಸ್ ಠಾಣೆಗಳಿಗೆ ಸಾರ್ವಜನಿಕರೇ ಕೆಲವೊಂದು ಮೂಲಭೂತ ಸೌಕರ್ಯಗಳನ್ನು ನೀಡುತ್ತಿದ್ದು ನಮ್ಮ ಪೊಲೀಸ್ ಇಲಾಖೆಯನ್ನು ಸರ್ವ ಸೌಕರ್ಯ ಇಲಾಖೆಯನ್ನಾಗಿ ಮಾಡುವಲ್ಲಿ ಸರಕಾರ ಕಾಳಜಿ ವಹಿಸಬೇಕಾಗಿದೆ
ಈ ಕಾರ್ಯಕ್ರಮದಲ್ಲಿ ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಅಬ್ದುಲ್ ರಹೀಮ್ , ಮುಫ್ತಿ ಅಸ್ಗರ್ ಸಾಬ್ , ಕ್ರೈಂ ಬ್ರಾಂಚ್ ಇನ್ಸ್ಪೆಕ್ಟರ್ ರಕ್ಷಿತ್ , ಸಂಘಟನೆಯ ಕಾರ್ಯಕರ್ತರು ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here